ಕರ್ನಾಟಕ

karnataka

ETV Bharat / state

ಫಲ್ಗುಣಿ ನದಿಯಲ್ಲಿ ಮುಳುಗಿ ಯುವಕ ಸಾವು - ಬೆಳ್ತಂಗಡಿ

ಸ್ನೇಹಿತರು ನಿಶಾಂತ್‌ನನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳಕ್ಕೆ ಆ್ಯಂಬುಲೆನ್ಸ್ ತರಿಸಿದ್ದು, ದುರಾದೃಷ್ಟವಶಾತ್ ಆ ವೇಳೆಗಾಗಲೇ ನಿಶಾಂತ್ ಪ್ರಾಣ ಪಕ್ಷಿ ಹಾರಿ ಹೋಗಿದೆ.

Belthangadi
ಫಲ್ಗುಣಿ ನದಿಯಲ್ಲಿ ಮುಳುಗಿ ಯುವಕ ಸಾವು

By

Published : May 6, 2021, 9:55 PM IST

Updated : May 7, 2021, 12:50 PM IST

ಬೆಳ್ತಂಗಡಿ(ದ.ಕ):ತಾಲೂಕಿನ ಪಡಂಗಡಿಯ ಅಲಂದೋಡಿ ಸಮೀಪದ ಫಲ್ಗುಣಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಗೆಳೆಯನನ್ನು ರಕ್ಷಿಸಲು ಹೋದ ಯುವಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.

ಕಾರ್ಯಾಣ ನಿವಾಸಿ ದುಗ್ಗಪ್ಪ ಎಂಬವರ ಮಗ ನಿಶಾಂತ್ (22) ಸಾವನ್ನಪ್ಪಿದ ಯುವಕ. ಈತ ಮತ್ತು ಸ್ನೇಹಿತರು ಸ್ಥಳೀಯ ಹೊಳೆಗೆ ಸ್ನಾನಕ್ಕೆ ಎಂದು ಹೋಗಿದ್ದರು. ಸ್ನೇಹಿತನೊಬ್ಬ ನೀರಿನಲ್ಲಿ ಮುಳುಗಿದ್ದು ಆತನನ್ನು ನಿಶಾಂತ್ ಮತ್ತು ಗೆಳೆಯರು ಸೇರಿ ರಕ್ಷಿಸಿ, ದಡಕ್ಕೆ ತಂದಿದ್ದರೂ, ನಿಶಾಂತ್ ಸುಳಿಗೆ ಸಿಲುಕಿದ್ದಾನೆ. ಸುಮಾರು 20 ನಿಮಿಷ ನೀರಿನೊಳಗಿದ್ದು ಬಳಿಕ ಸ್ಥಳಿಯ ಮುಳುಗು ತಜ್ಞರು ಈತನನ್ನು ಮೇಲಕ್ಕೆ ಎತ್ತಿದ್ದಾರೆ.

ಈ ವೇಳೆ, ಆತನ ಸ್ನೇಹಿತರು ನಿಶಾಂತ್‌ನನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳಕ್ಕೆ ಆ್ಯಂಬುಲೆನ್ಸ್ ತರಿಸಿದ್ದು, ದುರಾದೃಷ್ಟವಶಾತ್ ಆ ವೇಳೆಗಾಗಲೇ ನಿಶಾಂತ್ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡುತ್ತಿದ್ದ ನಿಶಾಂತ್ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ, ಈತ ಬಳಂಜ ವಾಲಿಬಾಲ್ ಕ್ಲಬ್‌ನ ಸದಸ್ಯರಾಗಿದ್ದರು.

Last Updated : May 7, 2021, 12:50 PM IST

ABOUT THE AUTHOR

...view details