ಕರ್ನಾಟಕ

karnataka

ETV Bharat / state

ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಯುವಕರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ - ನೇತ್ರಾವತಿ ನದಿಯಲ್ಲಿ ಯುವಕನ ಮೃತ ದೇಹ ಪತ್ತೆ,

ಒಬ್ಬ ಯುವಕನ ಶವ ಆಡಂಕುದ್ರ ಬಳಿ ಹರಿಯುವ ನೇತ್ರಾವತಿ ನದಿಯಲ್ಲಿ ಪತ್ತೆಯಾದರೆ, ಮತ್ತೊಬ್ಬ ಯುವಕನ ಮೃತದೇಹ ಪಾಣೆಮಂಗಳೂರು ಸಮೀಪ ದೊರೆತಿದೆ.

Young man dead body found, Young man dead body found in Netravati river, Ullal crime news, ಯುವಕ ಮೃತ ದೇಹ ಪತ್ತೆ, ನೇತ್ರಾವತಿ ನದಿಯಲ್ಲಿ ಯುವಕನ ಮೃತ ದೇಹ ಪತ್ತೆ, ಉಳ್ಳಾಲ ಅಪರಾಧ ಸುದ್ದಿ,
ಗಲ್ಫ್ ರಾಷ್ಟ್ರದಿಂದ ಹಿಂದುರುಗಿದ್ದ ಯುವಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ

By

Published : Apr 30, 2021, 8:46 AM IST

ಉಳ್ಳಾಲ: ಇತ್ತೀಚೆಗೆ ಕೊರೊನಾ ಕಾರಣದಿಂದಾಗಿ ಗಲ್ಫ್ ರಾಷ್ಟ್ರದಿಂದ ಮರಳಿ ಬಂದಿದ್ದ ಯುವಕನ ಶವ ಆಡಂಕುದ್ರ ಬಳಿ ನೇತ್ರಾವತಿ ನದಿಯಲ್ಲಿ ದೊರೆತಿದೆ.

ನಿತಿನ್ (32) ಸೋಮವಾರ ಮಧ್ಯಾಹ್ನ ತನ್ನಿಬ್ಬರು ಸ್ನೇಹಿತರ ಜೊತೆಗೆ ಸೋಮೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ನಂತರ ಸಂಜೆ ಮೂವರು ಸೇರಿ ನೇತ್ರಾವತಿ ರೈಲ್ವೇ ಸೇತುವೆ ಬಳಿ ತೆರಳಿದ್ದರು. ಅಲ್ಲಿಂದ ನಿತಿನ್ ನಾಪತ್ತೆಯಾಗಿದ್ದರು.

ಈ ಬಗ್ಗೆ ನಿತಿನ್ ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಿತಿನ್ ಜೊತೆಗಿದ್ದ ಇಬ್ಬರು ಸ್ನೇಹಿತರ ವಿಚಾರಣೆ ನಡೆಸಿದ್ದು, ನಿನ್ನೆ ಸಂಜೆಯ ವೇಳೆಗೆ ಮೃತದೇಹ ಪತ್ತೆಯಾಗಿದೆ.

ಸ್ನೇಹಿತರ ಜೊತೆಗೆ ವಿಹರಿಸುತ್ತಿದ್ದ ಸಂದರ್ಭ ರೈಲು ಬಂದಿದ್ದು, ಇದರಿಂದ ಗಾಬರಿಗೊಂಡು ನಿತಿನ್ ನದಿಗೆ ಹಾರಿದ್ದ ಎನ್ನಲಾಗ್ತಿದೆ. ನಿತಿನ್ ಈ ಹಿಂದೆ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು, ಕೊರೊನಾ ಲಾಕ್​ಡೌನ್ ನಂತರ ಊರಿಗೆ ಬಂದು ವೆಲ್ಡರ್ ವೃತ್ತಿ ನಡೆಸುತ್ತಿದ್ದರು.

ಮತ್ತೊಂದು ಶವ ಪತ್ತೆ

ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ರಾಗಿದಕುಮೇರು ನಿವಾಸಿಯೊಬ್ಬರ ಮೃತದೇಹ ಪಾಣೆಮಂಗಳೂರು ಸಮೀಪ ನೇತ್ರಾವತಿ ಹೊಳೆಯಲ್ಲಿ ಪತ್ತೆಯಾಗಿದೆ.

ಪುತ್ತೂರಿನ ನೇತ್ರಾವತಿ ನದಿ ಬಳಿ ಮತ್ತೊಂದು ಶವ ಪತ್ತೆ

ರಾಗಿದಕುಮೇರು ನಿವಾಸಿ ಪದ್ಮನಾಭ ರೈ ಅವರ ಪುತ್ರ ನಿರಂಜನ ರೈ (35) ಶವ ನೇತ್ರಾವತಿ ನದಿಯಲ್ಲಿ ದೊರೆತಿದೆ. ನಿರಂಜನ ರೈ 28 ರಂದು ತಡರಾತ್ರಿ ಹೊಟ್ಟೆನೋವೆಂದು ಮನೆಯಿಂದ ಸ್ನೇಹಿತರ ಬೈಕ್‌ನಲ್ಲಿ ಆಸ್ಪತ್ರೆಗೆಂದು ತೆರಳಿದ್ದರಂತೆ. ಆದರೆ ಬೆಳಗ್ಗಿನ ತನಕ ಅವರು ಮನೆಗೆ ಹಿಂದಿರುಗದೇ ಇರುವುದನ್ನು ಗಮನಿಸಿದ ಮನೆ ಮಂದಿ ಹುಡಕಾಟದಲ್ಲಿ ತೊಡಗಿದ್ದರು.

ಈ ನಡುವೆ ಪಾಣೆಮಂಗಳೂರು ಸೇತುವೆಯಲ್ಲಿ ಬೈಕ್​ ಚಾಲನೆಯಲ್ಲಿರುವುದನ್ನು ಗಮನಿಸಿದ ಪೊಲೀಸರು ಬೈಕ್ ಮಾಲೀಕರಿಗೆ ಫೋನ್‌ ಮಾಡಿದ್ದಾರೆ. ಬಳಿಕ ಹೊಳೆಯಲ್ಲಿ ಪತ್ತೆ ಕಾರ್ಯ ನಡೆಸಿದಾಗ ಮೃತದೇಹ ದೊರೆತಿದೆ.

ABOUT THE AUTHOR

...view details