ಉಳ್ಳಾಲ:ಮಾನಸಿಕ ಖಿನ್ನತೆಯಿಂದ ಯುವಕನೊಬ್ಬ ಮನೆಯೊಳಗೆ ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ವಿದ್ಯಾನಗರದ ಕೆಮ್ಮಿಂಜೆಯಲ್ಲಿ ನಡೆದಿದೆ.
ಮಾನಸಿಕ ಖಿನ್ನತೆ: ಯುವಕ ಆತ್ಮಹತ್ಯೆ - ಉಳ್ಳಾಲದ ಯುವಕ ಆತ್ಮಹತ್ಯೆ
ವಿದ್ಯಾನಗರದ ಪ್ರವೀಣ್(32) ಮೃತ ಯುವಕ. ಅವಿವಾಹಿತನಾಗಿರುವ ಪ್ರವೀಣ್ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದು, ಸಾಧು ಸ್ವಭಾವದ ಯುವಕನೆಂದು ನೆರೆಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದ.
ಯುವಕ ಆತ್ಮಹತ್ಯೆ
ವಿದ್ಯಾನಗರದ ಪ್ರವೀಣ್(32) ಮೃತ ಯುವಕ. ಅವಿವಾಹಿತನಾಗಿರುವ ಪ್ರವೀಣ್ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದು, ಸಾಧು ಸ್ವಭಾವದ ಯುವಕನೆಂದು ನೆರೆಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದ.
ಕಳೆದ ಕೆಲವು ದಿನಗಳಿಂದ ಆರೋಗ್ಯದ ಕುರಿತಾಗಿ ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕೊಣಾಜೆ ಪೊಲೀಸರು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.