ಮಂಗಳೂರು: ಉಸಿರಾಟ ತೊಂದರೆಯಿಂದ ಮೃತಪಟ್ಟ ಯುವಕನ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಉಸಿರಾಟದ ತೊಂದರೆಯಿಂದ ಸಾವು: ಪರೀಕ್ಷೆಗೆ ಗಂಟಲು ದ್ರವ ರವಾನೆ - corona news
ನಗರದ ಹೊರವಲಯದ ಸುರತ್ಕಲ್ ಬಳಿಯ 27 ವರ್ಷ ವಯಸ್ಸಿನ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲು ಕರೆತಲಾಗುತ್ತಿತ್ತು. ಆದರೆ , ಯುವಕ ದಾರಿ ಮಧ್ಯೆ ಸಾವಿಗೀಡಾಗಿದ್ದಾನೆ .
![ಉಸಿರಾಟದ ತೊಂದರೆಯಿಂದ ಸಾವು: ಪರೀಕ್ಷೆಗೆ ಗಂಟಲು ದ್ರವ ರವಾನೆ ಉಸಿರಾಟದ ತೊಂದರೆಯಿಂದ ಸಾವು](https://etvbharatimages.akamaized.net/etvbharat/prod-images/768-512-6796361-936-6796361-1586924384826.jpg)
ಉಸಿರಾಟದ ತೊಂದರೆಯಿಂದ ಸಾವು
ನಗರದ ಹೊರವಲಯದ ಸುರತ್ಕಲ್ ಬಳಿಯ 27 ವರ್ಷ ವಯಸ್ಸಿನ ಯುವಕ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಲು ಬರುವಾಗ ರಸ್ತೆಮಧ್ಯೆ ಮೃತಪಟ್ಟಿದ್ದಾನೆ.
ಮೃತ ಯುವಕನ ಗಂಟಲು ದ್ರವವನ್ನು ತೆಗೆದುಕೊಂಡಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ವೈದ್ಯರು, ಕೊರೊನಾ ಸೋಂಕಿರಬಹುದಾ ಎಂದು ತಿಳಿಯಲು ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.