ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ ಸಮುದ್ರ ತೀರದಲ್ಲಿ ಅಪರಿಚಿತ ಮಹಿಳೆಯ ಅರ್ಧ ಮೃತದೇಹ ಪತ್ತೆಯಾಗಿದೆ.
ಕೋಟೆಪುರ ಸಮುದ್ರತೀರದಲ್ಲಿ ಅಪರಿಚಿತ ಮಹಿಳೆಯ ಅರ್ಧ ಮೃತದೇಹ ಪತ್ತೆ - mangalore
ಕೋಟೆಪುರ ಸಮುದ್ರ ತೀರದಲ್ಲಿ ಅಪರಿಚಿತ ಮಹಿಳೆಯ ಅರ್ಧ ಮೃತದೇಹ ಪತ್ತೆಯಾಗಿದೆ. ತೀರಕ್ಕೆ ಈ ಮೃತದೇಹವು ಎಲ್ಲಿಂದಲೋ ಕೊಚ್ಚಿ ಬಂದಿದ್ದು, ಮೃತದೇಹದ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ.
ಮೃತದೇಹ ಪತ್ತೆ
ಮೃತದೇಹದಲ್ಲಿ ಸೊಂಟದಿಂದ ಕೆಳಗಿನ ಭಾಗ ಮಾತ್ರ ಇದ್ದು, ಉಳಿದ ದೇಹ ಪತ್ತೆಯಾಗಿಲ್ಲ. ಕೋಟೆಪುರದ ಸಮುದ್ರ ತೀರಕ್ಕೆ ಈ ಮೃತದೇಹವು ಎಲ್ಲಿಂದಲೋ ಕೊಚ್ಚಿ ಬಂದಿದ್ದು, ಎರಡೂ ಕಾಲುಗಳಲ್ಲಿ ಕಾಲ್ಗೆಜ್ಜೆ ಹಾಗೂ ಕಾಲುಂಗುರಗಳಿವೆ. ಮೃತದೇಹ ಯಾರದು, ಕೊಲೆಯೋ, ಆತ್ಮಹತ್ಯೆಯೋ ಎಂಬುವುದು ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ.
ಇನ್ನು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.