ಮಂಗಳೂರು:ಲಾಕ್ಡೌನ್ ಸಮಯದಲ್ಲಿ ಕೆಲವು ಕುಟುಂಬಗಳಿಗೆ ಒಂದು ಹೊತ್ತಿನ ಊಟಕ್ಕೆ ಕಷ್ಟವಾಗಿರುವ ಸಂದರ್ಭದಲ್ಲಿ ಇಲ್ಲೊಬ್ಬ ಯುವತಿ ಬೀದಿ ನಾಯಿಗಳ ಹಸಿವನ್ನು ನೀಗಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ.
ಈ ಸಂದರ್ಭದಲ್ಲಿ ಕೇವಲ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳು ಕೂಡಾ ಆಹಾರವಿಲ್ಲದೆ ಕಂಗೆಟ್ಟಿವೆ. ರಸ್ತೆ ಬದಿ ತಿಂಡಿ ತಿಂದು ಬದುಕುತ್ತಿದ್ದ ಬೀದಿ ನಾಯಿಗಳಿಗೂ ಈಗ ಹಸಿವಿನ ಬಿಸಿ ತಟ್ಟಿದೆ.
ಇಲ್ಲಿಯವರೆಗೆ ಹೇಗೋ ಮೀನು ಮಾರುಕಟ್ಟೆ, ಬೇಕರಿ ತಿಂಡಿ, ಫಾಸ್ಟ್ ಫುಡ್ಗಳ ಮೊರೆ ಹೋಗುತ್ತಿದ್ದ ಬೀದಿ ನಾಯಿಗಳು ಈಗ ಪರದಾಡುವಂತಹ ಸ್ಥಿತಿ ತಲುಪಿವೆ. ಹಾಗಾಗಿ ಇವುಗಳಿಗೆ ಆಹಾರ ನೀಡಿ ಆರೈಕೆ ಮಾಡಿ ಇಲ್ಲಿನ ಯುವತಿಯೋರ್ವರು ಇದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ.