ಮಂಗಳೂರು:ಅನ್ಯ ಕೋಮಿನ ಯುವತಿವೋರ್ವಳನ್ನು ತನ್ನ ಧರ್ಮಕ್ಕೆ ಮತಾಂತರಗೊಳಿಸಿ ವಿವಾಹವಾಗಿ ಇದೀಗ ನಡುನೀರಿನಲ್ಲಿ ಕೈಬಿಟ್ಟಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವಿಶ್ವಹಿಂದೂ ಪರಿಷತ್, ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಶಾಂತಿ ಜೂಬಿ ಅಲಿಯಾಸ್ ಆಸಿಯಾ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಮತಾಂತರಗೊಂಡು ದೌರ್ಜನ್ಯಕ್ಕೊಳಗಾಗಿರುವ ಮಹಿಳೆ. ಈಕೆಗೆ ಮರಳಿ ತನ್ನ ಧರ್ಮಕ್ಕೆ ಬರಲು ಮನವೊಲಿಸಲಾಯಿತು.
ಸುಳ್ಯ ತಾಲೂಕಿನ ಗಾಂಧಿನಗರದ ಇಬ್ರಾಹಿಂ ಖಲೀಲ್ ಕಟ್ಟೆಮಾರ್, ಫೇಸ್‌ಬುಕ್ ಮೂಲಕ ಕೇರಳದ ಕಣ್ಣೂರಿನ ಪ್ರತಿಷ್ಠಿತ ಮನೆತನದ ಶಾಂತಿ ಜೂಬಿ ಎಂಬಾಕೆಯನ್ನು ತನ್ನ ಧರ್ಮಕ್ಕೆ ಮತಾಂತರಿಸಿ 2017ರ ಜುಲೈ 12ರಂದು ವಿವಾಹವಾಗಿದ್ದ ಎನ್ನಲಾಗ್ತಿದೆ. ತನ್ನ ಮನೆಯವರ ಮಾತು ಕೇಳಿ ಆಕೆಯನ್ನು ದೂರ ಮಾಡಿರುವ ಪರಿಣಾಮ ಆಕೆ ಅತಂತ್ರಳಾಗಿದ್ದಾಳೆ. ಇಬ್ರಾಹಿಂ ಖಲೀಲ್ ಕಟ್ಟೆಮಾರ್ ತನ್ನನ್ನು ದೂರ ಮಾಡುತ್ತಿರುವ ಬಗ್ಗೆ ಆಸಿಯಾ ತನ್ನ ಕರುಣಾಜನಕ ಕಥೆಯನ್ನು ಬುಧವಾರ ಮಂಗಳೂರಿನಲ್ಲಿ ಮಾಧ್ಯಮದ ಮುಂದೆ ವಿವರಿಸಿದ್ದರು.
ಇದನ್ನು ಓದಿ.. ಗಂಡನನ್ನು ಹುಡುಕಿ ಕೊಡಿ: ಮತಾಂತರಗೊಂಡ ಆಸಿಯಾ ಅಳಲು
ಈ ಹಿನ್ನೆಲೆ ಮಧ್ಯೆ ಪ್ರವೇಶಿಸಿರುವ ವಿಶ್ವ ಹಿಂದೂ ಪರಿಷತ್ನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಸುರೇಖಾ ರಾಜ್, ಲತೀಶ್ ಗುಂಡ್ಯ ಮತ್ತಿತರರು ಆಸಿಯಾರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ತಿಳಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.