ಮಂಗಳೂರು:ಇಲ್ಲಿನ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯರ ಒಳವಸ್ತ್ರಗಳನ್ನು ಕದಿಯುತ್ತಿದ್ದ ಕಾಮುಕನನ್ನು ಹಿಡಿದು ಥಳಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಲೇಡಿಸ್ ಪಿಜಿಗೆ ನುಗ್ಗಿದ ಕಾಮುಕ: ಯುವತಿಯರಿಂದ ಥಳಿತ - ಹಂಪನಕಟ್ಟೆ
ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಕಾಮುಕನನ್ನು ಹಿಡಿದು ಯುವತಿಯರೇ ಥಳಿಸಿರುವ ಘಟನೆ ಮಂಗಳೂರಿನ ಹಂಪನಕಟ್ಟೆಯಲ್ಲಿ ನಡೆದಿದೆ.
![ಮಂಗಳೂರಿನ ಲೇಡಿಸ್ ಪಿಜಿಗೆ ನುಗ್ಗಿದ ಕಾಮುಕ: ಯುವತಿಯರಿಂದ ಥಳಿತ ಕಾಮುಕನಿಗೆ ಯುವತಿಯರಿಂದಲೇ ಥಳಿತ](https://etvbharatimages.akamaized.net/etvbharat/prod-images/768-512-8573913-527-8573913-1598506607465.jpg)
ಕಾಮುಕನಿಗೆ ಯುವತಿಯರಿಂದಲೇ ಥಳಿತ
ಹಂಪನಕಟ್ಟೆಯಲ್ಲಿರುವ ಮಹಿಳಾ ಪಿಜಿಗೆ ರಾತ್ರಿ ವೇಳೆ ನುಗ್ಗಿದ ಕಾಮುಕನೊಬ್ಬ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ. ಈಗಾಗಲೇ ಅನೇಕ ಬಾರಿ ಈ ರೀತಿಯ ಕೆಲಸ ಮಾಡಿದ್ದ ಈತನಿಗೆ ಬುದ್ದಿ ಕಲಿಸಬೇಕು ಎಂದು ಅಲ್ಲಿದ್ದ ಕೆಲಸಗಾರರ ಜೊತೆ ಸೇರಿ ಯುವತಿಯರು ಕಾಮುಕನನ್ನು ಹಿಡಿದು ಥಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.