ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲೊಂದು ವಿಶೇಷ ಮದುವೆ.. ಪಿಎಂ ಕೇರ್ಸ್​ಗೆ ದೇಣಿಗೆ, ಕೊರೊನಾ ವಾರಿಯರ್ಸ್​ಗೆ ಸನ್ಮಾನ!! - ಮದುವೆ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್​ಗೆ ಸನ್ಮಾನ

ಪಿಎಂ ಕೇರ್ಸ್​​ ಫಂಡ್​ಗೆ ದೇಣಿಗೆ ನೀಡಿ ಕೊರೊನಾ ವಾರಿಯರ್ಸ್​ಗೆ ಸನ್ಮಾನ ಮಾಡುವ ಮಂಗಳೂರಿನಲ್ಲೊಂದು ಮದುವೆ ಕಾರ್ಯಕ್ರಮ ಗಮನ ಸೆಳೆದಿದೆ.

A special wedding in Mangaluru
ಮಂಗಳೂರಿನಲ್ಲೊಂದು ವಿಶೇಷ ಮದುವೆ

By

Published : Jun 16, 2020, 3:27 PM IST

ಮಂಗಳೂರು :ನಗರದಲ್ಲಿ ಇತ್ತೀಚೆಗೆ ನಡೆದ ಮದುವೆ ಕಾರ್ಯಕ್ರಮವೊಂದು ವಿಶೇಷ ಕಾರಣಕ್ಕೆ ಗಮನ ಸೆಳೆದಿದೆ.

ಬಾಳಂಭಟ್ ಸಭಾಂಗಣದಲ್ಲಿ ರಾಕೇಶ್ ಮತ್ತು ದಿವ್ಯ ಎಂಬುವರ ಮದುವೆ ಸರಳವಾಗಿ ನಡೆಸಲಾಗಿತ್ತು. ಕಾರ್ಯಕ್ರಮದಲ್ಲಿ ವಧುವಿನ ಸೋದರ ಮಾವ ಉದ್ಯಮಿ ಶ್ರೀಕರಪ್ರಭು ಪಿಎಂ ಕೇರ್ ನಿಧಿಗೆ 50 ಸಾವಿರ ರೂ. ಚೆಕ್ ಹಸ್ತಾಂತರಿಸಿದರು. ಅಲ್ಲದೆ ಲಾಕ್‌ಡೌನ್ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಅಡುಗೆ ಅನಿಲ ಸಿಲಿಂಡರ್ ವಿತರಿಸಿದ ಮೂವರು ಗ್ಯಾಸ್ ಸಂಸ್ಥೆಯ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಸನ್ಮಾನಿಸಿದರು.

ಲಾಕ್‌ಡೌನ್​ ಹಿನ್ನೆಲೆ ಮಾರ್ಗಸೂಚಿ ಪ್ರಕಾರ ಕೆಲ ಆಪ್ತ ಸಂಬಂಧಿಕರ‌ ಸಮ್ಮುಖದಲ್ಲಿ ಕಾರ್ಯಕ್ರಮದ ನಡೆದಿತ್ತು.

ABOUT THE AUTHOR

...view details