ಮಂಗಳೂರು:ಅಂಗಡಿಯೊಂದರಲ್ಲಿ ಮಲ್ಲಿಗೆ ಹೂ ಕಳವು ಮಾಡಿದ್ದ ಕಳ್ಳನ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಳಿಗೆ ಮಾಲೀಕ ಹರಿಬಿಟ್ಟಿದ್ದಾನೆ. 'ಈತ ಕಂಡರೆ ಸುಳಿವು ಕೊಡುವಂತೆ' ಮನವಿ ಮಾಡಿಕೊಂಡಿದ್ದಾನೆ.
ಮಲ್ಲಿಗೆ ಹೂವು ಕಳವು: ಖದೀಮನ ಪತ್ತೆಗೆ ಕಳ್ಳತನದ ವಿಡಿಯೋವನ್ನೇ ಹರಿಬಿಟ್ಟ ಮಾಲೀಕ..! - ಮಲ್ಲಿಗೆ ಹೂವು ಕಳವು ಪ್ರಕರಣ
ಕದ್ರಿ ಮಲ್ಲಿಕಟ್ಟೆಯ ಅಂಗಡಿಯೊಂದರಲ್ಲಿ ಮಲ್ಲಿಗೆ ಹೂವನ್ನು ಕದಿಯುತ್ತಿರುವ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಪಾದಿತನ ಪತ್ತೆಗೆ ಮಳಿಗೆ ಮಾಲೀಕ ಕಳ್ಳತನ ವಿಡಿಯೋ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಖದೀಮ ಕಂಡು ಬಂದರೆ ತನಗೆ ಮಾಹಿತಿ ನೀಡುವಂತೆ ಕೋರಿದ್ದಾನೆ.
A Shop owner viral theft video in Mangalore
ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಎಸ್.ಎನ್. ಪ್ಲವರ್ ಹೂವಿನ ಅಂಗಡಿಯಲ್ಲಿ ಮಲ್ಲಿಗೆ ಹೂವಿನ ಅಟ್ಟಿಯನ್ನು ರಾತ್ರಿ ವೇಳೆ ಕಳ್ಳನೋರ್ವ ಕದಿಯುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಿಸಿಟಿವಿ ದೃಶ್ಯಾವಳಿಗಳ್ನು ವೈರಲ್ ಮಾಡಿರುವ ಅಂಗಡಿ ಮಾಲೀಕ, 'ನಿತ್ಯ ಇದೇ ರೀತಿಯಲ್ಲಿ ಮಲ್ಲಿಗೆ ಹೂವಿನ ಅಟ್ಟಿಗಳು ಕಳು ಆಗುತ್ತಿವೆ. ಈತನನ್ನು ಕಂಡಲ್ಲಿ 9845524203 ಸಂಖ್ಯೆಗೆ ಕರೆ ಮಾಡಿ' ಎಂದು ಆಡಿಯೋ ವೈರಲ್ ಮಾಡಿದ್ದಾರೆ.