ಕರ್ನಾಟಕ

karnataka

ETV Bharat / state

ಅಪ್ರಾಪ್ತೆಯ ಜೊತೆ ಪ್ರೀತಿ ಪ್ರೇಮ: ಯುವಕನ ಹಿಡಿದು ಪೊಲೀಸರಿಗೊಪ್ಪಿಸಿದ ಹಿಂದೂ ಪರ ಸಂಘಟನೆ - ಯುವಕ ಪೊಲೀಸರ ವಶಕ್ಕೆ

25 ವರ್ಷದ ಯುವಕ ಹಲವು ದಿನಗಳಿಂದ ಬಾಲಕಿಯ ಜೊತೆ ಸುತ್ತಾಟ ನಡೆಸುತ್ತಿರುವುದು ಕಂಡುಬಂದಿತ್ತು. ಇಬ್ಬರೂ ತಮ್ಮ ಮನೆಯವರ ಕಣ್ತಪ್ಪಿಸಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ್ದ ಬಾಲಕಿ ಕುಟುಂಬಸ್ಥರು ಹಿಂದೂ ಪರ ಸಂಘಟನೆಯ ಗಮನಕ್ಕೆ ತಂದಿದ್ದರು.

ಅಪ್ರಾಪ್ತೆಯ ಜೊತೆ ಪ್ರೀತಿ ಪ್ರೇಮ

By

Published : Jan 21, 2021, 6:01 PM IST

ಉಳ್ಳಾಲ (ಮಂಗಳೂರು): 8ನೇ ತರಗತಿ ವಿದ್ಯಾರ್ಥಿನಿ ಜೊತೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಬೈಕಿನಲ್ಲಿ ಸುತ್ತಾಡಿಸುತ್ತಿದ್ದ ಯುವಕನನ್ನು ಹಿಡಿದು ಬಾಲಕಿ ಪೋಷಕರು ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

25 ವರ್ಷದ ಯುವಕ ಹಲವು ದಿನಗಳಿಂದ ಬಾಲಕಿಯ ಜೊತೆ ಸುತ್ತಾಟ ನಡೆಸುತ್ತಿರುವುದು ಕಂಡುಬಂದಿತ್ತು. ಇಬ್ಬರೂ ತಮ್ಮ ಮನೆಯವರ ಕಣ್ತಪ್ಪಿಸಿ ಓಡಾಡುತ್ತಿದ್ದರು.

ಇದನ್ನು ಗಮನಿಸಿದ್ದ ಬಾಲಕಿ ಕುಟುಂಬಸ್ಥರು ಹಿಂದೂ ಪರ ಸಂಘಟನೆಯ ಗಮನಕ್ಕೆ ತಂದಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸುವಂತೆ ಕೇಳಿದ್ದಾರೆ. ಕೆಲಸ ಕಾರ್ಯ ಇಲ್ಲದೆ ಖಾಲಿ ತಿರುಗುತ್ತಿದ್ದ ಯುವಕನನ್ನು ಗಮನಿಸಿದ ಸಂಘಟನೆಯು ಇಂದು ಯುವಕ ಹಾಗೂ ಬಾಲಕಿಯನ್ನು ರೆಡ್​​ ಹ್ಯಾಂಡ್ ಆಗಿ ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಯುವಕನಿಗೆ ಎಚ್ಚರಿಕೆ ನೀಡಿ ಇನ್ನೊಮ್ಮೆ ಈ ರೀತಿ ಮಾಡದಂತೆ ಮುಚ್ಚಳಿಕೆ ಪತ್ರ ಬರೆಸಿ ಬಿಟ್ಟುಕಳುಹಿಸಿದ್ದಾರೆ.

ಇದನ್ನೂ ಓದಿ:ಕಿರುಕುಳ ನೀಡಿದ ಆರೋಪಿ ಬಂಧನ: ಪೊಲೀಸರ ಸಮ್ಮುಖದಲ್ಲೇ ಯುವತಿಯಿಂದ ಕಪಾಳಮೋಕ್ಷ..

ABOUT THE AUTHOR

...view details