ETV Bharat Karnataka

ಕರ್ನಾಟಕ

karnataka

ETV Bharat / state

ಕೋಮಾಕ್ಕೆ ತೆರಳಿ ಸಾವಿನ ಸನಿಹದಲ್ಲಿದ್ದ ವೃದ್ಧೆ: ಮನೆಗೆ ಕರೆತರುವಾಗ ಮಾರ್ಗಮಧ್ಯೆ ಚೇತರಿಕೆ..! - Mangalore Private Hospital

ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಇನ್ನು ಬದುಕುಳಿಯುವುದಿಲ್ಲ ಎಂದು ಮನೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಅಲ್ಲದೆ ಆಕ್ಸಿಜನ್​​ ತೆಗೆದ ಕೆಲವೇ ಸಮಯದಲ್ಲಿ ಸಾವನ್ನಪ್ಪುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಮನೆಗೆ ಕರೆತರುವ ವೇಳೆ ಪವಾಡವೆಂಬಂತೆ ವೃದ್ಧೆ ಚೇತರಿಸಿಕೊಂಡಿದ್ದಾರೆ.

Getting back to a coma and recovering on the road to death
ಕೋಮಾಕ್ಕೆ ತೆರಳಿ ಸಾವಿನ ಸನಿಹದಲ್ಲಿದ್ದ ವೃದ್ಧೆ ಮನೆಗೆ ಕರೆತರುವ ಮಾರ್ಗಮಧ್ಯೆ ಚೇತರಿಕೆ..!
author img

By

Published : Aug 24, 2020, 2:42 PM IST

ಸುಳ್ಯ(ದ.ಕ):ಇನ್ನೇನು ಸಾವಿನ ಸನಿಹದಲ್ಲಿದ್ದಾರೆ ಎಂಬ ವೃದ್ಧೆವೋರ್ವರು ಆಸ್ಪತ್ರೆಯಿಂದ ಮರಳಿ ಮನೆಗೆ ಕರೆತರುವ ವೇಳೆ ಚೇತರಿಸಿಕೊಂಡ ಕುತೂಹಲಕಾರಿ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮರ್ಕಂಜ ಗ್ರಾಮದ ಪಟ್ಟೆ ಮನೆ ಹೇಮಾವತಿ ರೈ ಎಂಬ 80ವರ್ಷದ ವೃದ್ಧೆಯನ್ನು ಅನಾರೋಗ್ಯದ ಹಿನ್ನೆಲೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದಾದ ಬಳಿಕ ವೃದ್ಧೆ ಕೊಮಾಗೆ ಹೋಗಿದ್ದರು.

ಆಸ್ಪತ್ರೆಯ ವೈದ್ಯರು ಸಹ ವೃದ್ಧೆ ಬದುಕುಳಿಯುವುದಿಲ್ಲ ಎಂದು ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅಲ್ಲದೆ ಆಕ್ಸಿಜನ್​​ ತೆಗೆದ ಕೆಲವೇ ಸಮಯದಲ್ಲಿ ವೃದ್ಧೆ ಸಾವನ್ನಪ್ಪುವುದಾಗಿ ತಿಳಿಸಿದ್ದಾರೆ.

ಅವರ ಸೂಚನೆಯಂತೆ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ. ಆದರೆ ಆ್ಯಂಬುಲೆನ್ಸ್​​​​ನಲ್ಲಿ ಮನೆಗೆ ಕರೆತರುವ ಮಾರ್ಗಮಧ್ಯೆ ವೃದ್ಧೆ ಹೇಮಾವತಿ ರೈ ಕೆಮ್ಮಿದ್ದಲ್ಲದೆ, ಉಸಿರಾಟ ಪ್ರಕ್ರಿಯೆ ಕಂಡುಬಂದಿದೆ. ತಕ್ಷಣ ಮನೆಯಲ್ಲಿ ನಡೆಯುತ್ತಿದ್ದ ಸಿದ್ಧತೆಗಳನ್ನು ನಿಲ್ಲಿಸುವಂತೆ ವೃದ್ಧೆಯ ಜೊತೆಗಿದ್ದವರು ಸೂಚಿಸಿದ್ದಾರೆ. ಇದೀಗ ಹೇಮಾವತಿ ರೈ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details