ಕರ್ನಾಟಕ

karnataka

By

Published : Mar 15, 2020, 2:46 PM IST

ETV Bharat / state

ತ್ಯಾಜ್ಯ ಸಂಸ್ಕರಣೆಗೆ ಹೊಸ ವಿಧಾನ: 24 ಗಂಟೆಯೊಳಗೆ ಗೊಬ್ಬರವಾಗಿ ಪರಿವರ್ತನೆ

ಘನತ್ಯಾಜ್ಯಗಳನ್ನು ನಿರ್ವಹಣೆ ಮಾಡಲು ಹೈಕ ಸಂಸ್ಥೆ ಬಯೋಮಾಲಿ ಎಂಬ ನೂತನ ತಂತ್ರಜ್ಞಾನವನ್ನು ಅಳವಡಿಸಿದೆ.

manglore
ನೂತನ ತಂತ್ರಜ್ಞಾನ ಘಟಕದ ಉದ್ಘಾಟನೆ

ಮಂಗಳೂರು:ಫ್ಲ್ಯಾಟ್‌ಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯಗಳನ್ನು ನಿರ್ವಹಣೆ ಮಾಡಲು ಹೈಕ ಎಂಬ ಸಂಸ್ಥೆ ಬಯೋಮಾಲಿ ಎಂಬ ನೂತನ ತಂತ್ರಜ್ಞಾನವನ್ನು ಅಳವಡಿಸಿದೆ. ಈ ತಂತ್ರಜ್ಞಾನದ ಮೂಲಕ 24 ಗಂಟೆಯೊಳಗೆ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.

ಈ ಘಟಕವನ್ನು ನಗರದ ಕರಂಗಲಪಾಡಿಯಲ್ಲಿರುವ ಸಾಯಿಗ್ರ್ಯಾಂಡ್ಯೂರ್ ಅಪಾರ್ಟ್‌ಮೆಂಟ್​ನಲ್ಲಿ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈ ಜನಸ್ನೇಹಿ ತಂತ್ರಜ್ಞಾನವು 100 ಕೆ.ಜಿ. ಘನತ್ಯಾಜ್ಯವನ್ನು ಕೇವಲ 24 ಗಂಟೆಯೊಳಗೆ 10 ಕೆ.ಜಿ. ಗೊಬ್ಬರವಾಗಿ ಪರಿವರ್ತಿಸುತ್ತಿದೆ. ಈ ರೀತಿಯ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಎಲ್ಲಾ ಫ್ಲ್ಯಾಟ್​ಗಳಲ್ಲಿ ಬಳಸಿದರೆ ಘನತ್ಯಾಜ್ಯದ ದೊಡ್ಡ ಪ್ರಮಾಣದ ತೊಂದರೆಗಳಿಗೆ ಕಡಿವಾಣ ಹಾಕಬಹುದು ಎಂದು ಹೇಳಿದರು.

ತ್ಯಾಜ್ಯ ಸಂಸ್ಕರಣೆಗೆ ಹೈಕ ಸಂಸ್ಥೆ ಹೊಸ ವಿಧಾನ ಅಳವಡಿಸಿದೆ.

ಈ ಸಂದರ್ಭದಲ್ಲಿ ಹೈಕ ಸಂಸ್ಥೆಯ ಸಂಸ್ಥಾಪಕ ಚಂದ್ರಶೇಖರ ಶೆಟ್ಟಿ, ಸಹ-ಸಂಸ್ಥಾಪಕಿ ಸಮೀಕ್ಷಾ ಶೆಟ್ಟಿ, ಸಾಯಿ ಗ್ರ್ಯಾಂಡ್ಯೂರ್ ಅಪಾರ್ಟ್‌ಮೆಂಟ್​ನ ಅಧ್ಯಕ್ಷ ವೃಷಭರಾಜ ಜೈನ್, ಮಂಗಳೂರು ಮನಪಾ ಸದಸ್ಯರಾದ ಸುಧೀರ್ ಶೆಟ್ಟಿ, ಅನಿಲ್ ಕುಮಾರ್, ರೆಡ್ ಕ್ರಾಸ್ ಸಿಎ ಶಾಂತಾರಾಂ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details