ಕರ್ನಾಟಕ

karnataka

ETV Bharat / state

ನೇಪಾಳಿ ಮೂಲದ ಯುವಕ ಮಂಗಳೂರಲ್ಲಿ ನಾಪತ್ತೆ - ಮಂಗಳೂರು ಲೆಟೆಸ್ಟ್ ನ್ಯೂಸ್

ನೇಪಾಳಿ ಮೂಲದ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಮಂಗಳೂರು ಪೂರ್ವ ಠಾಣೆ ಕದ್ರಿಯಲ್ಲಿ ದೂರು ದಾಖಲಾಗಿದ್ದು, ಯುವಕನ ಕುರಿತಂತೆ ಪೊಲೀಸ್​ ಇಲಾಖೆ ಪ್ರಕಟಣೆ ಹೊರಡಿಸಿದೆ.

ನೇಪಾಳ ಮೂಲದ ಯುವಕ ಮಂಗಳೂರಲ್ಲಿ ನಾಪತ್ತೆ
A Nepalese youth from Mangalore is missing

By

Published : Jan 29, 2020, 11:32 PM IST

ಮಂಗಳೂರು: ನೇಪಾಳಿ ಮೂಲದ ಯುವಕನೊಬ್ಬ ಮಂಗಳೂರಲ್ಲಿ ನಾಪತ್ತೆಯಾಗಿರುವ ಕುರಿತು ಮಂಗಳೂರು ಪೂರ್ವ ಠಾಣೆ ಕದ್ರಿಯಲ್ಲಿ ದೂರು ದಾಖಲಾಗಿದೆ.

ಕದ್ರಿ ಶಿವಭಾಗ್ 5ನೇ ಅಡ್ಡರಸ್ತೆಯ ನಿವಾಸಿ ಫೇಕನಾ ಪಾಸ್ಮಾನ್ (27) ನಾಪತ್ತೆಯಾದ ಯುವಕ. ಕೆಲಸಕ್ಕೆಂದು ಹೇಳಿ ಹೋದವನು ತನ್ನ ನಿವಾಸಕ್ಕೂ ಬಾರದೆ, ನೇಪಾಳಕ್ಕೂ ಹೋಗದೆ ಕಾಣೆಯಾಗಿದ್ದಾನೆ.

ಯುವಕನ ವಿವಿರ :ಎತ್ತರ-5 ಅಡಿ 3 ಇಂಚು, ಗೋಧಿ ಮೈಬಣ್ಣ, ಸಾಧಾರಣ ಮೈ ಕಟ್ಟು, ಟೀಶರ್ಟ್, ಪ್ಯಾಂಟ್ ಧರಿಸಿದ್ದಾರೆ. ಇವರು ಹಿಂದಿ, ನೇಪಾಳಿ ಭಾಷೆ ಮಾತನಾಡುತ್ತಾನೆ.

ಇವರ ಬಗ್ಗೆ ಮಾಹಿತಿ ದೊರಕಿದಲ್ಲಿ ದೂರವಾಣಿ ಸಂಖ್ಯೆ 0824-2220520 ಅಥವಾ ಜಿಲ್ಲಾ ಕಂಟ್ರೋಲ್ ರೂಮ್ ಸಂಖ್ಯೆ 2220800-222081 ನ್ನು ಸಂಪರ್ಕಿಸಬೇಕೆಂದು ಮಂಗಳೂರು ಪೂರ್ವ ಪೊಲೀಸ್ ಠಾಣೆ, ಠಾಣಾಧಿಕಾರಿ, ಕದ್ರಿ ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ABOUT THE AUTHOR

...view details