ಬಂಟ್ವಾಳ (ದ.ಕ.): ಕೊರೊನಾ ಜಾಗೃತಿ ಮೂಡಿಸಲು ಬಂಟ್ವಾಳ ಪುರಸಭೆ ಹರಸಾಹಸ ಪಡುತ್ತಿದ್ದು, ಗುರುವಾರ ಬೆಳಗ್ಗೆಯೂ ಪುರಸಭೆ ಸಿಬ್ಬಂದಿ ಅಂಗಡಿಗಳ ಮುಂದೆ ಗುರುತು ಮಾಡಿ, ಸಾಮಾಜಿಕ ಅಂತರ ಕಾಪಾಡುವ ಮಹತ್ವ ತಿಳಿಸಿದರು.
ಬಂಟ್ವಾಳ: ಸಾಮಾಜಿಕ ಅಂತರ ಕಾಪಾಡುವ ಮಹತ್ವ ಕುರಿತು ಪುರಸಭೆ ಅರಿವು - ಬಂಟ್ವಾಳದಲ್ಲಿ ಸಾಮಾಜಿಕ ಅಂತರ ಕಾಪಾಡುವ ಮಹತ್ವ ಕುರಿತು ತಿಳಿಸಿದ ಪುರಸಭೆ ಅಧಿಕಾರಿ
ಜನರು ದಿನನಿತ್ಯದ ಅಗತ್ಯ ಸಾಮಾನುಗಳ ಖರೀದಿಗೆ ಬರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪುರಸಭೆಯ ಸಿಬ್ಬಂದಿ ಸುಣ್ಣದಿಂದ ಗುರುತು ಮಾಡಿದ ಸ್ಥಳದಲ್ಲಿ ಸರತಿಯಲ್ಲಿ ನಿಂತು ಖರೀದಿಸುವಂತೆ ತಿಳಿ ಹೇಳುತ್ತಿದ್ದಾರೆ.
ನಗರದಲ್ಲಿ ಇಂದು ಬೆಳಗ್ಗಿನ ಜಾವವೇ ಅಂಗಡಿಗಳಿಗೆ ಅಗತ್ಯ ವಸ್ತು ಖರೀದಿಗಾಗಿ ಜನರು ಧಾವಿಸುತ್ತಿದ್ದರು. ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸೂಚನೆಯಂತೆ ಪುರಸಭೆಯ ಇಂಜಿನಿಯರ್ ಸಹಾಯಕ ಇಕ್ಬಾಲ್ ಮತ್ತು ಪೌರಕಾರ್ಮಿಕ ಸಿಬ್ಬಂದಿ ಸಹಿತ ಪುರಸಭೆಯ ಸಿಬ್ಬಂದಿ ಸುಣ್ಣದಿಂದ ಗುರುತು ಮಾಡಿ, ಜನರು ಖರೀದಿಗೆ ಬರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಹತ್ವ ತಿಳಿಸಿ, ಜನರನ್ನೂ ಅಲ್ಲೇ ನಿಲ್ಲುವಂತೆ ಸೂಚಿಸಿದರು.
ಇದಕ್ಕೆ ಬಂಟ್ವಾಳದ ಜನರು ಸ್ಪಂದಿಸಿದ್ದು, ಅಂತರ ಕಾಯ್ದುಕೊಂಡು ಅಂಗಡಿಗೆ ತೆರಳಿ ಖರೀದಿ ನಡೆಸಿದರು. ವಿಶೇಷವಾಗಿ ಮೆಡಿಕಲ್ ಶಾಪ್ಗಳಲ್ಲಿ ಗುರುವಾರ ಬೆಳಗ್ಗೆಯೂ ಜನಸಂದಣಿ ಕಾಣುತ್ತಿತ್ತು.