ಕರ್ನಾಟಕ

karnataka

ETV Bharat / state

ಮಕ್ಕಳಿಬ್ಬರಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ: ಬಾಲಕಿ ಸಾವು - Manglore

ಮಾನಸಿಕವಾಗಿ ನೊಂದ ಮಹಿಳೆಯೋರ್ವಳು ತಂಪು ಪಾನೀಯದಲ್ಲಿ ವಿಷಬೆರೆಸಿ ಮಕ್ಕಳಿಗೆ ನೀಡಿ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

A mother who attempted suicide
ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

By

Published : Sep 20, 2020, 8:25 AM IST

Updated : Sep 20, 2020, 12:53 PM IST

ಮಂಗಳೂರು:ಸಂಬಂಧಿಕರ ಮನೆಯಲ್ಲಿದ್ದ ಮಹಿಳೆಯೊಬ್ಬಳು ತನ್ನ ಮಕ್ಕಳಿಬ್ಬರಿಗೆ ತಂಪು ಪಾನೀಯದಲ್ಲಿ ವಿಷ ಪದಾರ್ಥ ಬೆರೆಸಿ, ಕುಡಿಸಿ ಬಳಿಕ ತಾನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಿಡ್ಪಳ್ಳಿ ಗ್ರಾಮದಲ್ಲಿ ನಡೆದಿದ್ದು, ಇವರಲ್ಲಿ 8 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಪಡುವನ್ನೂರು ಗ್ರಾಮದ ಸಂಜಕ್ಕಾಡಿ ನಿವಾಸಿ ರಘುನಾಥ ಎಂಬುವರ ಪತ್ನಿ ದಿವ್ಯಶ್ರೀ (29), ತನ್ನ ಮಕ್ಕಳಿಗೆ ತಂಪು ಪಾನೀಯ ಕುಡಿಸಿ, ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ ಎಂದು ತಿಳಿದು ಬಂದಿದೆ. ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಮತ್ತು ಆಕೆಯ ಮಗ ಚೇತರಿಸಿಕೊಂಡಿದ್ದು, 8 ವರ್ಷದ ಮಗಳು ನಿನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಘಟನೆ ವಿವರ:ರಘುನಾಥ ಬೇರೊಬ್ಬ ಮಹಿಳೆಯೊಂದಿಗೆ ವಾಸವಾಗಿದ್ದಾರೆಂದು ಆರೋಪಿಸಿ ದಿವ್ಯಶ್ರೀ ಕಳೆದ ಮಾರ್ಚ್ ತಿಂಗಳಿಂದ ತನ್ನ ಇಬ್ಬರು ಮಕ್ಕಳೊಂದಿಗೆ ನಿಡ್ಪಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದಳು ಎನ್ನಲಾಗಿದೆ. ಈ ನಡುವೆ ಮಾನಸಿಕವಾಗಿ ನೊಂದ ದಿವ್ಯಶ್ರೀ ಸಂಬಂಧಿ ಮಮತಾ ಮಂಗಳೂರಿಗೆ ತೆರಳಿದ್ದ ವೇಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಳು.

ಅಸ್ವಸ್ಥಗೊಂಡ ದಿವ್ಯಶ್ರೀಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಾಗ ವಿಷ ಪದಾರ್ಥ ಸೇವಿಸಿರುವುದು ಬೆಳಕಿಗೆ ಬಂದಿದೆ. ಮಕ್ಕಳಿಬ್ಬರನ್ನು ಮಂಗಳೂರು ಎ.ಜೆ ಅಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ದಿವ್ಯಶ್ರೀ ಚೇತರಿಕೆಗೊಂಡಿದ್ದರೂ ಅವರ ಮಕ್ಕಳಿಬ್ಬರು ಗಂಭೀರ ಸ್ಥಿತಿಯಲ್ಲಿದ್ದರು. ನಿನ್ನೆ ತಡರಾತ್ರಿ ಬಾಲಕಿ ಅನ್ವಿತಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.

ಮಕ್ಕಳ ತಾಯಿಯ ವಿರುದ್ಧ ಪ್ರಕರಣ ದಾಖಲು: ಮಕ್ಕಳಿಬ್ಬರಿಗೆ ವಿಷ ಪದಾರ್ಥ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದಿವ್ಯಶ್ರೀ ವಿರುದ್ಧ ಅವಳ ಸಂಬಂಧಿ ತುಂಗ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಪತ್ನಿಗೆ ಕಿರುಕುಳ ನೀಡಿದ ಪತಿಯ ವಿರುದ್ಧ ಪ್ರಕರಣ ದಾಖಲು:ಸಜಂಕಾಡಿ ನಿವಾಸಿ ರಘುನಾಥ 2 ವರ್ಷಗಳಿಂದ ತನಗೆ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ. ಮಕ್ಕಳ ಖರ್ಚಿಗೆ ಹಣವನ್ನೂ ನೀಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಈ ನಡುವೆ ಗಂಡ ಬೇರೊಂದು ಮಹಿಳೆ ಜೊತೆಯಲ್ಲಿರುವುದು ತಿಳಿದುಬಂದಿತ್ತು ಎಂದು ದಿವ್ಯಶ್ರೀ ನೀಡಿದ ಹೇಳಿಕೆಯಂತೆ ರಘುನಾಥ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Sep 20, 2020, 12:53 PM IST

ABOUT THE AUTHOR

...view details