ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ಮಾರ್ಗದಲ್ಲಿನ ಮರವೂರು ಸೇತುವೆ ನಿನ್ನೆ ಬೆಳಗ್ಗೆ ಪಿಲ್ಲರ್ವೊಂದು ಸ್ವಲ್ಪ ಮಟ್ಟಕ್ಕೆ ಕುಸಿದಿದ್ದು, ಈ ಅಪಾಯದ ಮುನ್ಸೂಚನೆ ಬಗ್ಗೆ ತಿಂಗಳ ಮೊದಲೇ ಆ ಮಾರ್ಗದಲ್ಲಿ ನಿತ್ಯ ಸಂಚಾರ ಮಾಡುವ ವ್ಯಕ್ತಿಯೊಬ್ಬರು ತಿಳಿಸಿದ್ದರು. ಈ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕಳವಾರು ಮೊಹಮ್ಮದ್ ಎಂಬವರು ಪ್ರತಿನಿತ್ಯವೂ ಮರವೂರು ಸೇತುವೆ ದಾರಿಯಾಗಿಯೇ ಸಂಚರಿಸುತ್ತಿರುತ್ತಾರೆ. ಮೇ 15ರಂದು ಮರವೂರು ಸೇತುವೆ ಮೇಲೆ ಸಂಚರಿಸುತ್ತಿದ್ದರು. ಈ ವೇಳೆ ಸೇತುವೆಯಲ್ಲಿನ ಬಿರುಕು ಕಣ್ಣಿಗೆ ಬಿದ್ದಿದೆ. ತಕ್ಷಣ ವಾಹನ ನಿಲ್ಲಿಸಿ ವಿಡಿಯೋ ಮಾಡಿದ್ದಾರೆ.