ಕರ್ನಾಟಕ

karnataka

ETV Bharat / state

ಅಧಿಕಾರಿಗಳ ಕಣ್ತಪ್ಪಿಸಿ ಬಾಲ್ಯ ವಿವಾಹ.. ಒಂದೇ ಮದುವೆಯನ್ನು ಎರಡನೇ ಬಾರಿ ತಡೆದ ಅಧಿಕಾರಿಗಳು

ತೆಂಕಕಜೆಕಾರ್ ಗ್ರಾಮದಲ್ಲಿ ಅಪ್ರಾಪ್ತ ಬಾಲಕ ಮದುವೆ ಸಿದ್ಧತೆ: ಅಧಿಕಾರಿಗಳು ಅಪ್ರಾಪ್ತ ಬಾಲಕನ ರಕ್ಷಣೆ - ಮದುವೆ ನಡೆಸದಂತೆ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡು ಅಧಿಕಾರಿಗಳ ಎಚ್ಚರಿಕೆ

Officials prevented  minor boy marriage
ಅಪ್ರಾಪ್ತ ಬಾಲಕನ ಮದುವೆ ತಡೆದ ಅಧಿಕಾರಿಗಳು

By

Published : Mar 5, 2023, 9:29 PM IST

ಬಂಟ್ವಾಳ (ದಕ್ಷಿಣ ಕನ್ನಡ): ಅಪ್ರಾಪ್ತ ಬಾಲಕನೊಬ್ಬನ ಮದುವೆಗೆ ಸಿದ್ಧತೆಯಲ್ಲಿರುವಾಗ ಅಧಿಕಾರಿಗಳು ದಾಳಿ ನಡೆಸಿ, ಮದುವೆ ನಡೆಸದಂತೆ ಮುಚ್ಚಳಿಕೆ ಬರೆಸಿಕೊಂಡ ಘಟನೆ ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ವ್ಯಾಪ್ತಿ ತೆಂಕಕಜೆಕಾರ್ ಗ್ರಾಮದಲ್ಲಿ ಶನಿವಾರ ನಡೆದಿದೆ.

ತೆಂಕಕಜೆಕಾರ್ ಗ್ರಾಮದ ಮನೆಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನ ಮಾ.5 ರಂದು ಮದುವೆ ನಿಶ್ಚಯಿಸಿ, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅಪ್ರಾಪ್ತ ಬಾಲಕನ ಮದುವೆಗೆ ನಿಶ್ಚಯಿಸಿರುವ ಮಾಹಿತಿ ಅಧಿಕಾರಿಗಳಿಗೆ ದೊರೆತ ಹಿನ್ನೆಲೆ ಮನೆಗೆ ಧಾವಿಸಿ, ಮದುವೆ ನಡೆಸದಂತೆ ಮನೆಯವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಕಳೆದ ವರ್ಷ ಈತನಿಗೆ ಇದೇ ರೀತಿ ಮದುವೆಗಾಗಿ ಸಕಲ ಸಿದ್ಧತೆಗಳು ನಡೆದಿದ್ದವು. ಈ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಮನೆಗೆ ಹೋಗಿ ವಿಚಾರ ತಿಳಿಸಿ ಮದುವೆಯನ್ನು ನಿಲ್ಲಿಸಿದ್ದರು. ಇದೀಗ ಎರಡನೇ ಬಾರಿ ಅದೇ ರೀತಿ ಅಪ್ರಾಪ್ತ ಬಾಲಕನಿಗೆ ಮತ್ತೆ ಮದುವೆಗಾಗಿ ತಯಾರಿಯಲ್ಲಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಬಂಟ್ವಾಳ ಸಿಡಿಪಿಒ‌‌ ಗಾಯತ್ರಿ ಕಂಬಳಿ ಅವರು ಪುಂಜಾಲಕಟ್ಟೆ ಎಸ್ಐ ಆಂಜನೇಯ ರೆಡ್ಡಿ ಹಾಗೂ ಸಿಡಿಪಿಒ ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಮನೆಗೆ ತೆರಳಿ ಮದುವೆ ನಿಲ್ಲಿಸಿದ್ದಾರೆ.

ಕಳೆದ ಬಾರಿ ಅಪ್ರಾಪ್ತ ಬಾಲಕನಿಗೆ ಮದುವೆ ಮಾಡಲು ಅಧಿಕಾರಿಗಳು ಅವಕಾಶ ನೀಡಿಲ್ಲ ಎಂಬ ಕಾರಣಕ್ಕಾಗಿ ಪೋರ್ಜರಿ ಬರ್ತ್ ಸರ್ಟೀಪಿಕೇಟ್ ಸೃಷ್ಟಿಸಿ, ಸ್ಥಳಕ್ಕೆ ಬಂದ ಅಧಿಕಾರಿಗಳ ಕಣ್ಣಿಗೆ ಮಣ್ಣೇರಚಲು ನೋಡಿದ್ದಾರೆ. ಆದರೆ ಅಧಿಕಾರಿಗಳು ಅವರು ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಅದು ಸುಳ್ಳು ದಾಖಲೆ ಪತ್ರಗಳು ಎಂಬುದು ಸಾಬೀತಾಗಿದೆ.

ಅಪ್ರಾಪ್ತ ಬಾಲಕಿ ಬಲವಂತದಿಂದ ಮದುವೆ, ಮಗ ತಾಯಿಗೆ 20 ವರ್ಷ ಕಠಿಣ ಶಿಕ್ಷೆ:ಬಾಲಕಿಯನ್ನು ಬಲವಂತದಿಂದ ಮದುವೆ ಮಾಡಿಕೊಂಡಿದ್ದ ಯುವಕ ಹಾಗೂ ಇದಕ್ಕೆ ಸಹಕರಿಸಿದ್ದ ಈತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯವು ಆದೇಶ ನೀಡಿದೆ. ತಮಿಳುನಾಡಿನ ತಿರಚಂಗೂರು ತಾಲೂಕಿನ ಶರಣ್ ರಾಜ್(25) ಹಾಗೂ ಈತನ ತಾಯಿ ಸೆಲ್ವಿ(40) ಶಿಕ್ಷೆಗೊಳಗಾದ ಅಪರಾಧಿಗಳು. 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಬೈಕ್​ ನಲ್ಲಿ ಹತ್ತಿಸಿಕೊಂಡು ಕರೆದೊಯ್ದು ಬಲವಂತದಿಂದ ಶರಣ್ ರಾಜ್ ಮದುವೆಯಾಗಿದ್ದ.

ಅಲ್ಲದೇ ಬಾಲಕಿಗೆ ಬಲವಂತವಾಗಿ ಲೈಂಗಿಕ‌ ದೌರ್ಜನ್ಯ ಎಸಗಲು ತಾಯಿ ಸೆಲ್ವಿ ಸಹಾಯ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ವಾದ - ಪ್ರತಿವಾದಗಳನ್ನು ಆಲಿಸಿ, ನ್ಯಾಯಮೂರ್ತಿ ನಿಶಾರಾಣಿ ಅವರು, ತಾಯಿ ಹಾಗೂ ಮಗನಿಗೆ ತಲಾ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

2018 ರಲ್ಲಿ ಬಲವಂತಾಗಿ ಎಳೆದೊಯ್ದು ಮದುವೆ:ಶರಣ್ ರಾಜ್ ಎಲೆಕ್ಟ್ರೆಷಿಯನ್ ಕೆಲಸ ಮಾಡಿಕೊಂಡಿದ್ದ. ತಾಯಿ ಸೆಲ್ವಿ ಪೇಪರ್ ಮಿಲ್ ನಲ್ಲಿ ನೌಕರಿ ಮಾಡುತ್ತಿದ್ದರು. 2018 ರ ಸೆಪ್ಟೆಂಬರ್ 9 ರಂದು ಹನೂರು ತಾಲೂಕಿನ ಗ್ರಾಮವೊಂದರ 14 ವರ್ಷದ ಬಾಲಕಿಯನ್ನು ಶರಣ್ ರಾಜ್ ತನ್ನ ಬೈಕ್​ ನಲ್ಲಿ ಪುಸಲಾಯಿಸಿ ಕರೆದೊಯ್ದಿದ್ದನು. ಬಳಿಕ ಆ ಬಾಲಕಿ ಜೊತೆ ಬಲವಂತದಿಂದ ಮದುವೆ ಮಾಡಿಕೊಂಡು ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಕೃತ್ಯಕ್ಕೆ ತಾಯಿ ಸೆಲ್ವಿ ಮತ್ತು‌ ಶಶಿಕುಮಾರ್ ಎಂಬವರು ಸಹಕರಿಸಿದ್ದರು. ಈ ಘಟನೆ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಅಂದಿನ ಇನ್ಸ್​ಪೆಕ್ಟರ್​​​ ಬಿ.ಮಹೇಶ್ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ(ಕೃತ್ಯದ ಶಶಿಕುಮಾರ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ) ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಇದನ್ನೂಓದಿ:ಸಂಧ್ಯಾ ಸುರಕ್ಷಾ ಯೋಜನೆ ದುರ್ಬಳಕೆ : ಕಾಸು ಕೊಟ್ಟರೆ ಯುವಕರಿಗೂ ವೃದ್ಧಾಪ್ಯ ವೇತನ!

ABOUT THE AUTHOR

...view details