ಬೆಳ್ತಂಗಡಿ:ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಾಶಿಪಟ್ಣ ಗ್ರಾಮದ ಉರ್ಪಾಡಿಯಲ್ಲಿ ನಡೆದಿದೆ.
ಪ್ರಗತಿಪರ ಕೃಷಿಕ ಹಾಗೂ ಮೇಸ್ತ್ರಿ ಕೆಲಸಗಾರನಾಗಿದ್ದ ರವಿ (37) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ರವಿಗೆ ಒಂದುವರೆ ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದು, ತನ್ನ ಕುಟುಂಬದೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದರು.
ಮೇ 6 ರಂದು ರಾತ್ರಿ ಊಟ ಮಾಡಲು ಕರೆದಾಗ ರವಿ ಬಾರದಿದ್ದನ್ನು ಗಮನಿಸಿದ ಮನೆಯವರು ಹೊರ ಬಂದು ಹುಡುಕಾಡಿದ್ದಾರೆ. ಈ ವೇಳೆ ಮನೆಯ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡು ರವಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದ ರವಿಗೆ‘ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ಸಂಬಂಧಿಕರು ತಿಳಿಸಿದ್ದು. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಮೃತ ರವಿ, ತಾಯಿ, ಪತ್ನಿ, ಮಗು, ಮೂರು ಮಂದಿ ಸಹೋದರರು ಮತ್ತು ಮೂರು ಮಂದಿ ಸಹೋದರಿಯರನ್ನು ಅಗಲಿದ್ದಾರೆ. ಮೃತನ ಮನೆಗೆ ಕಾಶಿಪಟ್ಣ ಗ್ರಾ.ಪಂ ಅಧ್ಯಕ್ಷ ಸತೀಶ್ , ಸದಸ್ಯ ಪ್ರವೀಣ್ ಪಿಂಟೋ ಹಾಗೂ ಸ್ಥಳೀಯ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.