ಬಂಟ್ವಾಳ : ರಂಜಾನ್ ಇಫ್ತಾರ್ ( ವೃತ ತೊರೆಯುವುದು) ಗೆ ಸಮಯವಾದ ಕಾರಣ ಸಂಜೆ ಮನೆಗೆ ತೆರಳುತ್ತಿದ್ದ ಸಂದರ್ಭ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ ಸುದ್ದಿ ಕೇಳಿ, ಕೂಡಲೇ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಿದ ಗೂಡಿನಬಳಿಯ ಸತ್ತಾರ್ ಅವರ ಸೇವಾ ಮನೋಭಾವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಶುಕ್ರವಾರ ಸಂಜೆ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ್ದ. ಕೂಡಲೇ ಗೂಡಿನ ಬಳಿಯ ಸತ್ತಾರ್ ಮತ್ತು ಅವರ ಸ್ನೇಹಿತ ಸಾದಿಕ್ ರಕ್ಷಿಸಿದ್ದರು. ಉಪವಾಸಿಗರಾಗಿದ್ದ ಸತ್ತಾರ್ ಮತ್ತು ಸಾದಿಕ್ ಇಫ್ತಾರ್ಗೆ ಸಮಯವಾದರೂ ಮನೆಗೆ ಹೋಗದೇ ನದಿಯಲ್ಲಿ ಈಜಿ ಯುವಕನ ಪ್ರಾಣ ರಕ್ಷಿಸಿದ್ದಾರೆ. ಈ ಮೂಲಕ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.