ಕರ್ನಾಟಕ

karnataka

ETV Bharat / state

ಜಾಗದ ವಿವಾದಕ್ಕೆ ದಾಯಾದಿ ಕಲಹ: ಕೊಲೆಯಲ್ಲಿ ಅಂತ್ಯವಾದ ಜಗಳ, ತಂದೆ-ಮಗ ಅರೆಸ್ಟ್​  ​ - ಅಪ್ಪ ಮಗನಿಂದ ಕೊಲೆ ಸುದ್ದಿ

ಜಾಗದ ವಿವಾದವೊಂದು ಗಲಾಟೆಗೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲಿನಲ್ಲಿ ನಡೆದಿದೆ.

a man murdered for land issue
ಜಾಗದ ವಿವಾದ ಕೊಲೆಯಲ್ಲಿ ಅಂತ್ಯ

By

Published : Feb 10, 2020, 1:44 PM IST

ಬೆಳ್ತಂಗಡಿ/ದಕ್ಷಿಣ ಕನ್ನಡ: ಜಾಗ ವಿವಾದದ ಗಲಾಟೆಯೊಂದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲಿನಲ್ಲಿ ನಡೆದಿದೆ.

ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಈ ಕೊಲೆ ನಡೆದಿದ್ದು, ಉಮೇಶ್ ಸಮಗಾರ (50) ಎಂಬುವವರು ಕೊಲೆಯಾಗಿದ್ದಾರೆ. ತಂದೆ ಹಾಗೂ ಮಗ ಸೇರಿ ಈ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಆರೋಪಿಗಳಾದ ತಂದೆ ಯೋಗೀಶ್ ಹಾಗೂ ಅವರ ಮಗ ಜೀವನ್ ಬಂಧಿತರು.

ಜಾಗದ ವಿವಾದ ಕೊಲೆಯಲ್ಲಿ ಅಂತ್ಯ

ಕೊಲೆಯಾದ ಉಮೇಶ್ ಸಮಗಾರ ಅವರಿಗೆ ನಿನ್ನೆ ರಾತ್ರಿ ಸಂಬಂಧಿಗಳಾದ ಯೋಗೀಶ್ ಮತ್ತು ಜೀವನ್ ರ ಜೊತೆಗೆ ಜಾಗದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಈ ವೇಳೆ ಯೋಗೀಶ್ ಮತ್ತು ಜೀವನ್ ಅವರು ಉಮೇಶ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಮಧ್ಯರಾತ್ರಿ ಸುಮಾರು 2.30ರ ಸುಮಾರಿಗೆ ಉಮೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆರೋಪಿಗಳಿಬ್ಬರನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details