ಕರ್ನಾಟಕ

karnataka

ETV Bharat / state

ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಬಂಧನ: ಮಾಡದ ತಪ್ಪಿಗೆ ಮರ್ಯಾದೆ ಹೋಯ್ತೆಂದು ಅನ್ನ ನೀರು ತ್ಯಜಿಸಿ ವ್ಯಕ್ತಿ ಸಾವು - Sexual Assault

ಬೀಡಿ ಬ್ರಾಂಚ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆದಂ ಕುಂಞ ರವರು ಮುಂಡೊಳ ಮಸೀದಿಯ ಜಮಾಲತ್ ಆಡಳಿತ ಕಮಿಟಿಯ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Allegation of Sexual Assault
ಲೈಂಗಿಕ ದೌರ್ಜನ್ಯ ಆರೋಪಿ ಸಾವು

By

Published : Nov 13, 2021, 2:41 AM IST

ಪುತ್ತೂರು: ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ತಾಲ್ಲೂಕಿನ ಬಡಗನ್ನೂರು ಎಂಬಲ್ಲಿ ನಿಧನರಾಗಿದ್ದಾರೆ.

ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಆದಂ ಕುಂಞ (52 ) ರವರು ನ.11ರಂದು ನಿಧನರಾದರು. ಎರಡು ದಿನಗಳ ಹಿಂದೆ ಅಸ್ವಸ್ಥರಾದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಬೀಡಿ ಬ್ರಾಂಚ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆದಂ ಕುಂಞ ರವರು ಮುಂಡೊಳ ಮಸೀದಿಯ ಜಮಾಲತ್ ಆಡಳಿತ ಕಮಿಟಿಯ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಆದಂ ಕುಂಞ ರವರ ವಿರುದ್ಧ ಇತ್ತೀಚೆಗೆ ಬಡಗನ್ನೂರು ಗ್ರಾಮದ ದಲಿತ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಪೋಕ್ಸೋ(pocso act) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಅಷ್ಟೇ ಅಲ್ಲದೇ ಪೊಲೀಸರಿಂದ ಬಂಧಿತರಾಗಿ 12 ದಿನ ನ್ಯಾಯಾಂಗ ಬಂಧನದಲ್ಲಿದ್ದರು. ಕೆಲವೇ ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆದಂ ಕುಂಞ ಈ ಘಟನೆಯಿಂದ ನೊಂದುಕೊಂಡಿದ್ದರಲ್ಲದೇ ಊಟ, ನಿದ್ದೆಯನ್ನು ಸಂಪೂರ್ಣವಾಗಿ ಬಿಟ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಾನು ಮಾಡದ ತಪ್ಪಿಗೆ ಸಭ್ಯನಾದ ನನ್ನ ಮರ್ಯಾದೆ ಹೋಯಿತಲ್ಲ ಎಂದು ಕೊರಗುತ್ತಾ ಆಹಾರ ಸೇವಿಸುವುದನ್ನು ಬಿಟ್ಟಿದ್ದರು ಎಂದು ತಿಳಿದುಬಂದಿದೆ.

ಇದನ್ನು ಓದಿಷ: Road accident.. ಟಂಟಂಗೆ ಕಾರು ಡಿಕ್ಕಿ.. ಓರ್ವ ಮಹಿಳೆ ಸಾವು, 10 ಜನರಿಗೆ ಗಾಯ ಬಿಟ್ಟಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ABOUT THE AUTHOR

...view details