ಪುತ್ತೂರು(ದ.ಕ):ಪಾಣಾಜೆ- ಸೂರಂಬೈಲು ಸಮೀಪ ಆಟೋ ರಿಕ್ಷಾ ಮತ್ತು ಮಾರುತಿ ಓಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆಟೋ ರಿಕ್ಷಾದಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಆಟೋ, ಮಾರುತಿ ಓಮ್ನಿ ನಡುವೆ ಡಿಕ್ಕಿ: ಓರ್ವ ಸಾವು - ಸಂಪ್ಯ ಗ್ರಾಮಾಂತರ ಠಾಣೆ
ಆಟೋ ರಿಕ್ಷಾ ಮತ್ತು ಮಾರುತಿ ಓಮ್ನಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ಪಾಣಾಜೆ- ಸೂರಂಬೈಲು ಸಮೀಪ ನಡೆದಿದೆ.
ಡಿಕ್ಕಿ
ಗಾಯಾಳುಗಳಲ್ಲಿ ಇಬ್ಬರು ಕೊಯಕೂಡೆಲ್ ನಿವಾಸಿಗಳಾಗಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.