ಬಂಟ್ವಾಳ (ದಕ್ಷಿಣ ಕನ್ನಡ): ಬಂಟ್ವಾಳದ ಬಿ.ಸಿ. ರೋಡ್ನಲ್ಲಿ ನಾಲ್ಕು ಮಾರ್ಗಗಳು ಸೇರುವ ವೃತ್ತದ ಬಳಿ ಅಪಘಾತಗಳು ಮುಂದುವರೆದಿವೆ. ಸೋಮವಾರ ಸಂಜೆ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಂಟ್ವಾಳ ಬಿ.ಸಿ. ರೋಡ್, ಪಾಣೆಮಂಗಳೂರು ಕಡೆಗಳಿಗೆ ತೆರಳುವ ಈ ವೃತ್ತದ ಸುತ್ತಲಿನ ರಸ್ತೆಯಲ್ಲಿ ಎಚ್ಚರ ತಪ್ಪಿದರೆ ಅಪಾಯ ನಿಶ್ಚಿತ. ಬಿ.ಸಿ. ರೋಡ್ ಸರ್ಕಲ್ ಬಳಿ ಕಾರೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದೆ.