ಕರ್ನಾಟಕ

karnataka

ETV Bharat / state

ಶಂಕಿತ ಡೆಂಗ್ಯುಗೆ ಯುವಕ ಬಲಿ - ಮುಳಿಹಿತ್ಲು ನಿವಾಸಿ ಕಾರ್ತಿಕ್ ಮೃತಪಟ್ಟ ಯುವಕ

ಕಾರ್ತಿಕ್​ ಎಂಬಾತ ಹಲವು ದಿವಸಗಳಿಂದ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಡೆಂಗ್ಯು ಜ್ವರದಿಂದಾಗಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಾವಿಗೀಡಾದ ಕಾರ್ತಿಕ್​​

By

Published : Aug 1, 2019, 7:08 PM IST

ಮಂಗಳೂರು:ಜ್ವರದಿಂದಾಗಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ನಗರದ ಬೋಳಾರ ಮುಳಿಹಿತ್ಲು ನಿವಾಸಿ ಕಾರ್ತಿಕ್ ಮೃತಪಟ್ಟ ಯುವಕ. ಕಾರ್ತಿಕ್ ಡೆಂಗ್ಯು ಜ್ವರದಿಂದ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಪರಿಶೀಲನೆ ನಡೆಸಿ ದೃಢಪಡಿಸುದಾಗಿ ಹೇಳಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮಂಗಳಾದೇವಿ ಸಮೀಪದ ಗುಜ್ಜರಕೆರೆ, ಗೋರಕ್ಷದಂಡು, ಅರೆಕೆರೆಬೈಲು, ಬೋಳಾರ, ಮುಳಿಹಿತ್ಲು ಪ್ರದೇಶದಲ್ಲಿ ಡೆಂಗ್ಯು ರೋಗಿಗಳ ಸಂಖ್ಯೆ ಅಧಿಕವಾಗಿದೆ‌. ಕಾರ್ತಿಕ್ ಕೂಡಾ ಶಂಕಿತ ಡೆಂಗ್ಯುಗೆ ಬಲಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ABOUT THE AUTHOR

...view details