ಮಂಗಳೂರು:ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಅಕ್ರಮವಾಗಿ ಪ್ರವೇಶಿಸಿದ ಯುವಕನೊಬ್ಬನನ್ನು ಭದ್ರತಾ ಸಿಬ್ಬಂದಿ ಶನಿವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
ಕೇರಳದ ಕಾಸರಗೋಡು ನಿವಾಸಿ ಆರಿಫ್ ಕೊಟಿಕ್ಕ ಬಂಧಿತ ಯುವಕ. ನಿನ್ನೆ ರಾತ್ರಿ 11:45ರ ಸುಮಾರಿಗೆ ಈತ ಟರ್ಮಿನಲ್ ಕಟ್ಟಡದಿಂದ ನಿರ್ಗಮನ ದ್ವಾರದ ಮೂಲಕ ಹೊರಬರುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ. 15ರಂದು ಬೆಳಗ್ಗೆ 12:54ಕ್ಕೆ ದುಬೈಗೆ ತೆರಳುತ್ತಿದ್ದ ಸ್ಪೇಸ್ ಜೆಟ್ ಫ್ಲೈಟ್ ಎಸ್‌ಜಿ-59 ವಿಮಾನದ ಫ್ಯಾಬ್ರಿಕೇಟೆಡ್ ಇ-ಟಿಕೆಟ್ ತೋರಿಸಿ ಈತ ಟರ್ಮಿನಲ್ ಪ್ರವೇಶಿಸಿದ್ದನಂತೆ. ಆತನ ಕುಟುಂಬದ ನಾಲ್ವರು ದುಬೈಗೆ ತೆರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬೀಳ್ಕೊಡಲು ತಾನು ಟರ್ಮಿನಲ್ ಪ್ರವೇಶಿಸಿರುವ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಅವರನ್ನ ಬೀಳ್ಕೊಟ್ಟ ಬಳಿಕ ಟರ್ಮಿನಲ್ ಕಟ್ಟಡದ ನಿರ್ಗಮನ ಗೇಟ್ ಮೂಲಕ ವಾಪಸಾಗುತ್ತಿದ್ದಾಗ ನಿಲ್ದಾಣದ ಸಿಬ್ಬಂದಿ ವಶಕ್ಕೆ ಪಡೆದು, ಆತನ ಪ್ರಯಾಣದ ದಾಖಲೆಗಳನ್ನು ತಪಾಸಣೆ ನಡೆಸಿದ್ದಾರೆ.
ಟರ್ಮಿನಲ್ ಕಟ್ಟಡ ಪ್ರವೇಶಿಸಲು ಯುವಕ ಟಿಕೆಟ್‌ನಲ್ಲಿ ತನ್ನ ಹೆಸರನ್ನು ಅಕ್ರಮವಾಗಿ ಸೇರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.