ಕರ್ನಾಟಕ

karnataka

ETV Bharat / state

ಆಸ್ಕರ್ ಫರ್ನಾಂಡಿಸ್ ಆರೋಗ್ಯದಲ್ಲಿ ಕೊಂಚ ಚೇತರಿಕೆ.. ಬಾರದ ಪ್ರಜ್ಞೆ! - ಆಸ್ಕರ್ ಫರ್ನಾಂಡಿಸ್ ಆರೋಗ್ಯದಲ್ಲಿ ಕೊಂಚ ಚೇತರಿಕೆ

ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್​ ಆಸ್ಕರ್​ ಫರ್ನಾಂಡಿಸ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಆಸ್ಕರ್ ಫರ್ನಾಂಡಿಸ್
ಆಸ್ಕರ್ ಫರ್ನಾಂಡಿಸ್

By

Published : Jul 30, 2021, 10:23 AM IST

Updated : Jul 30, 2021, 11:05 AM IST

ಮಂಗಳೂರು: ಇಲ್ಲಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದ್ದು, ಇನ್ನೂ ಪ್ರಜ್ಞೆ ಬಂದಿಲ್ಲ.

ಆಸ್ಕರ್ ಫರ್ನಾಂಡಿಸ್, ಯೋಗ ಮಾಡುವ ವೇಳೆ ನಿಯಂತ್ರಣ ತಪ್ಪಿ ಜಾರಿ ಬಿದ್ದು ಮೆದುಳಿನ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಕಳೆದ ಕೆಲ ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರಿಗೆ ಜುಲೈ 27 ರಂದು ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ತೆಗೆಯಲಾಗಿತ್ತು.

ಇದನ್ನೂ ಓದಿ: ಅಲ್ಪಾವಧಿ ಬೆಳೆಗಳ ಮೇಲಿನ ಸಾಲ ಮನ್ನಾ ಮಾಡಿ: FMಗೆ ರಾಹುಲ್ ಗಾಂಧಿ ಪತ್ರ

ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ.

Last Updated : Jul 30, 2021, 11:05 AM IST

ABOUT THE AUTHOR

...view details