ಕಡಬ (ದಕ್ಷಿಣಕನ್ನಡ):ಹಲವಾರು ವರ್ಷಗಳ ಹಿನ್ನೆಲೆಯಿರುವ ಕಡಬದ ಬೃಹತ್ ನೀರಿನ ಟ್ಯಾಂಕ್ ಕುಸಿದು ಬೀಳುವ ಹಂತ ತಲುಪಿದೆ.
ನಿರ್ವಹಣೆಯಿಲ್ಲದೇ ಕುಸಿದು ಬೀಳುವ ಹಂತದಲ್ಲಿದೆ ಕಡಬದ ಬೃಹತ್ ನೀರಿನ ಟ್ಯಾಂಕ್ 1977-78ನೇ ಇಸವಿಯಲ್ಲಿ ಸಯ್ಯದ್ ಮೀರಾ ಸಾಹೇಬ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅಂದಿನ ಇಂಜಿನಿಯರ್ ಸಿ.ಎಂ.ಪಾಲಾಕ್ಷ ಎಂಬುವವರ ಮೇಲುಸ್ತುವಾರಿಯಲ್ಲಿ ನಿರ್ಮಾಣವಾಗಿ, 1979ರಲ್ಲಿ ಉದ್ಘಾಟನೆಗೊಂಡ ಈ ಬೃಹತ್ ನೀರಿನ ಟ್ಯಾಂಕ್ ನಿರ್ವಹಣೆಯಿಲ್ಲದೇ ಕುಸಿದು ಬೀಳುವ ಹಂತ ತಲುಪಿದೆ.
ಟ್ಯಾಂಕ್ನ ಅರ್ಧದಷ್ಟು ಭಾಗ ಕೆಸರು, ಗಲೀಜು ತುಂಬಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ನೀರನ್ನು ಇಡೀ ಕಡಬ ನಗರಕ್ಕೆ ನೀಡಲಾಗುತ್ತಿದೆ. ಈ ಬೃಹತ್ ಗಾತ್ರದ ಟ್ಯಾಂಕ್ನ ಕಂಬಗಳು ಬಿರುಕು ಬಿಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನಲಾಗಿದೆ.
ಆಕಸ್ಮಿಕವಾಗಿ ನೀರಿನ ಟ್ಯಾಂಕ್ ಏನಾದರೂ ಕುಸಿದು ಬಿದ್ದರೆ ಗ್ರಾಮ ಕರಣಿಕರ ಕಚೇರಿ, ಪಟ್ಟಣ ಪಂಚಾಯಿತಿ ಸೇರಿದಂತೆ ವಾಣಿಜ್ಯ ಕಟ್ಟಡಗಳಿಗೂ ಹಾನಿಯಾಗುವ ಸಂಭವವಿದೆ.
ಓದಿ:ಕಾಂಗ್ರೆಸ್‌ನಿಂದ ಸಿಡಿ ಕೇಸ್ ರೀವೈಂಡ್.. ಧರಣಿ ಮುಂದುವರೆಸಿದ್ದರಿಂದ ನಾಳೆಗೆ ಕಲಾಪ ಮುಂದೂಡಿಕೆ