ಧರ್ಮಸ್ಥಳ:ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಇಂದು ಧರ್ಮಸ್ಥಳಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳಿಗೆ ದಾರಿಯುದ್ದಕ್ಕೂ ಮುಸ್ಲಿಂ ಬಾಂಧವರು ಕುಡಿಯುವ ನೀರಿನ ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಿ ಮತ ಸೌಹಾರ್ದತೆ ಮೆರೆದಿದ್ದಾರೆ.
ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಬರುತ್ತಿರುವ ಭಕ್ತರಿಗೆ ಮುಸ್ಲಿಮರಿಂದ ಜ್ಯೂಸ್... ಮೇಳೈಸಿದ ಸೌಹಾರ್ದತೆ - ಕುಡಿಯುವ ನೀರಿನ ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಿ ಮತ ಸೌಹಾರ್ದತೆ
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಇಂದೂ ಧರ್ಮಸ್ಥಳಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.ಈ ಸಂದರ್ಭದಲ್ಲಿ ವಿವಿದ ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳಿಗೆ ದಾರಿಯುದ್ದಕ್ಕೂ ಮುಸ್ಲಿಂ ಬಾಂಧವರು ಕುಡಿಯುವ ನೀರಿನ ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಿ ಮತ ಸೌಹಾರ್ದತೆ ಮೆರೆದಿದ್ದಾರೆ.
ಧರ್ಮಸ್ಥಳಕ್ಕೆ ಹರಿದು ಬರುತ್ತಿದೆ ಪಾದಯಾತ್ರಿಗರ ದಂಡು
ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗಾಗಿ ದಾರಿಯಲ್ಲಿ ಹಲವು ಕಡೆ ಮಜ್ಜಿಗೆ, ಪಾನೀಯ, ಪಾನಕಗಳ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗ್ತಿದೆ. ಅದರಲ್ಲೂ ದಾರಿಯುದ್ದಕ್ಕೂ ಮುಸ್ಲಿಂ ಬಾಂಧವರು ಯಾತ್ರಿಕರಿಗೆ ಕುಡಿಯುವ ನೀರಿನ ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಿದ್ದಾರೆ.
ಇಂದು ಧರ್ಮಸ್ಥಳ ಕ್ಷೇತ್ರದಲ್ಲಿ ಮಂಜುನಾಥನಿಗೆ ಶಿವರಾತ್ರಿಯ ವಿಶೇಷ ಪೂಜೆಗಳು ನಡೆಯಲಿದ್ದು, ರಾತ್ರಿ ರಥೋತ್ಸವ ನಡೆಯಲಿದೆ. ಮಂಜುನಾಥನ ದರ್ಶನಕ್ಕೂ ಮುನ್ನ ಭಕ್ತರು ನೇತ್ರಾವತಿ ಸ್ನಾನ ಘಟ್ಟದಲ್ಲಿ ಪುಣ್ಯ ತೀರ್ಥ ಸ್ನಾನ ಮಾಡಿ ಬರುವ ಕಾರಣದಿಂದ ನೇತ್ರಾವತಿಯಲ್ಲೂ ದಟ್ಟ ಜನಸಂದಣಿ ಇದೆ.
Last Updated : Feb 21, 2020, 3:30 PM IST