ಬೆಳ್ತಂಗಡಿ: ಸೈನಿಕನೋರ್ವ ಯಾವುದೇ ಹಕ್ಕುಗಳಿಗೆ ಹೋರಾಡದೆ ಯಾವಾಗ ನಿಷ್ಠೆಯಿಂದ ದೇಶ ಸೇವೆಗೈಯಲು ಸಾಧ್ಯವಾಗುತ್ತದೋ ಆಗ ಆ ದೇಶ ಸುಭಿಕ್ಷೆಯಿಂದ ಕೂಡಿರುತ್ತದೆ. ಸೈನಿಕನ ಜೀವನ ಕಷ್ಟಗಳ ಪರ್ವತವಿದ್ದಂತೆ, ಕಷ್ಟಗಳನ್ನೇ ಸುಖವನ್ನಾಗಿ ಭಾವಿಸಿ ಒಗ್ಗಿಕೊಳ್ಳುವವನೇ ಸೈನಿಕ. ಎಲ್ಲರೂ ಒಗ್ಗೂಡಿ ಇರುವ ಸಂತೋಷವನ್ನು ಅರಸಿ ಈ ದೇಶದ ಏಕತೆ, ಅಖಂಡತೆಗಾಗಿ ಶ್ರಮಿಸೋಣ ಎಂದು ಮಾಜಿ ಸೈನಿಕ ಗೋಪಾಲಕೃಷ್ಣ ಕಾಂಚೋಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿ ತವರೂರಿಗೆ ಮರಳಿದ ಯೋಧರಾದ ಕನ್ಯಾಡಿಯ ಸುಧಾಕರ ಗೌಡ ಮತ್ತು ಮೇಘಶ್ಯಾಮ ಅವರಿಗೆ ಧರ್ಮಸ್ಥಳ ಹಾಗೂ ಉಜಿರೆ ಗ್ರಾಮಸ್ಥರು ಹಾಗೂ ಕನ್ಯಾಡಿ ವೀರಕೇಸರಿ ವತಿಯಿಂದ ಇಂದು ಉಜಿರೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ತುಂಗಪ್ಪ ಗೌಡ ಮಾತನಾಡಿ, ತಮ್ಮ ಸೇವೆಯನ್ನು ಈ ಮಾತೃಭೂಮಿಗಾಗಿ ಅರ್ಪಿಸಿ ಸೈನ್ಯಕ್ಕಾಗಿ ಸೇರ್ಪಡೆಗೊಂಡ ವೀರರ ಗೌರವಾರ್ಪಣೆ ಈ ನಾಡಿಗೆ ಹೆಮ್ಮೆಯ ವಿಚಾರ. ಇಂದು ನಿವೃತ್ತಿ ಹೊಂದಿದ ಸುಧಾಕರ ಗೌಡ ಹಾಗೂ ಮೇಘಶ್ಯಾಮ ಅವರನ್ನು ಪಡೆದ ಪೋಷಕರು ಧನ್ಯರು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:ಬಾಸ್ಕೆಟ್ ಬಾಲ್ ಅತೀ ವೇಗವಾಗಿ ಬೆಳೆಯುತ್ತಿರುವ ಕ್ರೀಡೆ; ಬೊಮ್ಮಾಯಿ