ಕರ್ನಾಟಕ

karnataka

ETV Bharat / state

ಗಣಪತಿ, ಶಾರದೆ ಸಹಿತ ನವದುರ್ಗೆಯರ ವೈಭವದ ಶೋಭಾಯಾತ್ರೆ ಸಂಪನ್ನ

ಪುತ್ತೂರಿನ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುತ್ತೂರು ದಸರಾ ಮಹೋತ್ಸವ ಕಳೆದ 12 ದಿನಗಳಿಂದ ಜರುಗಿದ್ದು, ಇಂದು ವೈಭವದ ಶೋಭಾಯಾತ್ರೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿದೆ.

ವೈಭವದ ಶೋಭಾಯಾತ್ರೆ

By

Published : Oct 10, 2019, 10:47 PM IST

ಮಂಗಳೂರು:ಪುತ್ತೂರು ನಗರ ಹೊರವಲಯದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ವತಿಯಿಂದ ಕಳೆದ ಹನ್ನೆರಡು ದಿನಗಳಿಂದ ಗಣಪತಿ, ಶಾರದೆ ಸಹಿತ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ನಡೆಯುತ್ತಿದ್ದ 17ನೇ ವರ್ಷದ 'ಪುತ್ತೂರು ದಸರಾ ಮಹೋತ್ಸವ' ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.

ಬೆಳಗ್ಗೆ ಕ್ಷೇತ್ರದಲ್ಲಿ ಚಂಡಿಕಾ ಹವನ ಜರುಗಿದ್ದು, ಈ ಸಂದರ್ಭದಲ್ಲಿ ಮಹಿಳೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಠಣೆ ನಡೆಯಿತು. ಮಧ್ಯಾಹ್ನ ಚಂಡಿಕಾ ಹವನದ ಪೂರ್ಣಾಹುತಿಯಾಗಿ ಬಳಿಕ ಪ್ರಸಾದ ವಿತರಣೆ ನಡೆಯಿತು. ಚಂಡಿಕಾ ಹವನ ಸೇವೆ ಮಾಡಿಸಿದ ಭಕ್ತಾದಿಗಳಿಗೆ ಪ್ರಸಾದದೊಂದಿಗೆ ಸೀರೆ ವಿತರಿಸಲಾಯಿತು.

ವೈಭವದ ಶೋಭಾಯಾತ್ರೆ

ಸಂಜೆ 4 ಗಂಟೆಗೆ ಗಣಪತಿ, ಶಾರದೆ, ನವದುರ್ಗೆಯರ ವೈಭವದ ಶೋಭಾಯಾತ್ರೆಗೆ ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಬಳಿಕ ಶೋಭಾಯಾತ್ರೆ ಚೆಂಡೆ, ಗೊಂಬೆ, ನಾಗಸಾಧು ವೇಷಧಾರಿಗಳು, ಶಂಖ, ಜಾಗಟೆಯೊಂದಿಗೆ ಸಂಪ್ಯ ಕ್ಷೇತ್ರದಿಂದ ಹೊರಟು ದರ್ಬೆ ಮಾರ್ಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜಲಸ್ತಂಭನಗೊಳ್ಳುವ ಮೂಲಕ ಮುಕ್ತಾಯವಾಯಿತು.

ABOUT THE AUTHOR

...view details