ಕರ್ನಾಟಕ

karnataka

ETV Bharat / state

ತಾಯಿಯ ಬುದ್ಧಿ ಮಾತಿಗೆ ಮನನೊಂದು ಬಾಲಕಿ ಆತ್ಮಹತ್ಯೆಗೆ ಶರಣು..! - ಮಂಗಳೂರು ಕ್ರೈಮ್​ ಸುದ್ದಿ

ತಾಯಿ ಬುದ್ಧಿ ಹೇಳಿದ್ದಕ್ಕೆ 10 ವರ್ಷದ ಮಗಳು ಬಾರದ ಲೋಕಕ್ಕೆ ತೆರಳಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

a girl to commit suicide
ಬಾಲಕಿ ಆತ್ಮಹತ್ಯೆ

By

Published : Jul 17, 2020, 4:30 PM IST

ಮಂಗಳೂರು:ತಾಯಿ ತನ್ನ ಮಗಳಿಗೆ ಬೈದು ಬುದ್ಧಿ ಮಾತು ಹೇಳಿದ್ದಕ್ಕೆ, ನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.

ಜಯಚಂದ್ರ ಎಂಬವರ ಪುತ್ರಿ ಪ್ರಿಯಾ ಎಂಬ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಿಯಾ ಉಪ್ಪಿನಂಗಡಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು.

ಗುರುವಾರ ಸಂಜೆ ತಲೆ ಕೂದಲು ಕಟ್ಟಲು ಹೇಳಿದಾಗ ತಾಯಿ ಬೈದರೆಂದು ಕೋಪ ಮಾಡಿಕೊಂಡ ಬಾಲಕಿ, ಶೌಚಾಲಯಕ್ಕೆ ತೆರಳಿದ್ದು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಯಲ್ಲಿ ಬಾಲಕಿ ಕಾಣಿಸದೇ ಇದ್ದಾಗ ಮನೆಯವರು ಹುಡುಕಾಟ ನಡೆಸಿದ್ದರು. ಆಗ ಆಕೆ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details