ಬೆಳ್ತಂಗಡಿ: ಧರ್ಮಸ್ಥಳಕ್ಕೆ ಕುಟುಂಬಸ್ಥರೊಂದಿಗೆ ಆಗಮಿಸಿದ್ದ ಬಾಲಕಿಯೊಬ್ಬಳು ಸ್ನಾನ ಮಾಡುತಿದ್ದ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ನದಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನಿಡ್ಲೆಯಲ್ಲಿ ನಡೆದಿದೆ.
ಸ್ನಾನಕ್ಕೆಂದು ನದಿಗೆ ಇಳಿದ ಬಾಲಕಿ ನೀರಲ್ಲಿ ಮುಳುಗಿ ಸಾವು - ಕಾಲು ಜಾರಿ ಬಿದ್ದು ಬಾಲಕಿ ಸಾವು
ಹರಕೆ ಮುಡಿ ಒಪ್ಪಿಸಿ ಸ್ನಾನಕ್ಕೆಂದು ನದಿಗೆ ಇಳಿದ ಬಾಲಕಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನಿಡ್ಲೆಯಲ್ಲಿ ನಡೆದಿದೆ.
death
ಮಾನಸ (15) ಮೃತಪಟ್ಟ ಬಾಲಕಿ. ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿಗಳಾದ ದೇವಯ್ಯ ಸ್ವಾಮಿ ಕುಟುಂಬಸ್ಥರು ಧರ್ಮಸ್ಥಳಕ್ಕೆ ಆಗಮಿಸಿದ್ದರು. ಹರಕೆ ಮುಡಿ ಒಪ್ಪಿಸಿ ಸ್ನಾನಕ್ಕೆಂದು ನೇತ್ರಾವತಿ ಘಟ್ಟಕ್ಕೆ ಹೋದಾಗ ಅಲ್ಲಿ ಹೆಚ್ಚು ಜನಸಂದಣಿ ಇರುವುದಕ್ಕೆ ನಿಡ್ಲೆ ಕುದ್ರಾಯ ಸಮೀಪದ ನದಿಗೆ ಸ್ನಾನಕ್ಕೆಂದು ಮಾನಸ ಬಂದಾಗ ಅಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಈ ಕುರಿತು ಬಾಲಕಿಯ ತಂದೆ ದೇವಯ್ಯಸ್ವಾಮಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.