ಬಂಟ್ವಾಳ(ದಕ್ಷಿಣಕನ್ನಡ):ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಬುಡಾ ಅಧ್ಯಕ್ಷರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ: ಸೈಬರ್ ಕ್ರೈಂ ಠಾಣೆಗೆ ದೂರು - ದಕ್ಷಿಣಕನ್ನಡ ಲೇಟೆಸ್ಟ್ ನ್ಯೂಸ್
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದೆ.
ನಕಲಿ ಅಕೌಂಟ್ ಮೂಲಕ ಬಿ.ದೇವದಾಸ ಶೆಟ್ಟಿಯವರ ಸ್ನೇಹಿತರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಅವರು ಸ್ನೇಹಿತರಾದೊಡನೆ ಅವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಗೂಗಲ್ ಪೇ, ಫೋನ್ ಪೇ ಅಥವಾ ಅಕೌಂಟ್ಗೆ 7,000 ರೂ. ಹಾಕಿ ನಾಳೆ ಬೆಳಗ್ಗೆ 10 ಗಂಟೆಗೆ ವಾಪಸ್ ನೀಡುತ್ತೇನೆ ಎಂದು ಸಂದೇಶ ಕಳುಹಿಸಿದ್ದಾರೆ. ಇದನ್ನು ನಂಬಿ ಕೆಲವರು ಮೋಸ ಹೋಗಿದ್ದಾರೆ. ಇದೇ ರೀತಿ ಶಿಕ್ಷಣ ಸಂಸ್ಥೆಯೊಂದರ ಸಿಬ್ಬಂದಿಯ ಹೆಸರಲ್ಲೂ ನಕಲಿ ಖಾತೆ ಸೃಷ್ಟಿಯಾಗಿದ್ದು, ಆ ಖಾತೆಯಿಂದಲೂ ಹಲವರಿಗೆ ಹಣದ ಬೇಡಿಕೆಯೊಟ್ಟಿದ್ದಾರೆ.
ದೇವದಾಸ ಶೆಟ್ಟಿ ಅವರು ಈ ಕುರಿತು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ತನಿಖೆ ಮುಂದುವರೆದಿದೆ.