ಕರ್ನಾಟಕ

karnataka

ETV Bharat / state

ಹೃದ್ರೋಗದಿಂದ ಚೇತರಿಸಿಕೊಂಡ ವ್ಯಕ್ತಿ.. ಆತನ ಕೃತಜ್ಞತೆಗೆ ಮನಸೋತ ಮಂಗಳೂರು ವೈದ್ಯ - ರೋಗಿಯ ಧನ್ಯವಾದ ಬಗ್ಗೆ ವೈದ್ಯ ಟ್ವೀಟ್,

ವೈದ್ಯರ ಯಶಸ್ವಿ ಚಿಕಿತ್ಸೆ ಬಳಿಕ ಹೃದ್ರೋಗದಿಂದ ಚೇತರಿಸಿಕೊಂಡಿರುವ ವ್ಯಕ್ತಿಯ ಕೃತಜ್ಞತೆಗೆ ಮಂಗಳೂರಿನ ವೈದ್ಯರೊಬ್ಬರು ಮನಸೋತಿದ್ದು, ಅದರ ಬಗ್ಗೆ ಟ್ವಿಟ್ಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

doctor tweet about patient, A doctor tweet about patient thanks style, Mangaluru doctor news, ರೋಗಿ ಕೃತಜ್ಞತೆಗೆ ಮನಸೋತ ವೈದ್ಯ, ರೋಗಿಯ ಧನ್ಯವಾದ ಬಗ್ಗೆ ವೈದ್ಯ ಟ್ವೀಟ್, ಮಂಗಳೂರು ವೈದ್ಯ ಸುದ್ದಿ,
ಜೀವ ಉಳಿಸಿರುವ ರೋಗಿ ಕೃತಜ್ಞತೆಗೆ ಮನಸೋತ ವೈದ್ಯ

By

Published : Dec 22, 2021, 4:28 AM IST

Updated : Dec 22, 2021, 6:27 AM IST

ಮಂಗಳೂರು:ಜೀವ ಉಳಿಸುವ ವೈದ್ಯರನ್ನು ದೇವರೇ ಎಂಬಂತೆ ಬಿಂಬಿಸುವ ಎಷ್ಟೋ ಮಂದಿಯಿದ್ದಾರೆ. ಅವರಲ್ಲಿ ಅಂತಹ ಧನ್ಯತಾ ಭಾವವಿರುತ್ತದೆ. ಅಂಥಹದ್ದೇ ಘಟನೆಯೊಂದು ನಗರದಲ್ಲಿ ನಡೆದಿದೆ. ಈ ವಿಚಾರವನ್ನು ಸ್ವತಃ ವೈದ್ಯರೇ ತಮ್ಮ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಇಂಟರ್​ವೆನ್ಷನಲ್​ ಕಾರ್ಡಿಯೊಲಜಿಸ್ಟ್​ ಆಗಿರುವ ಡಾ.ಪದ್ಮನಾಭ ಕಾಮತ್​ ತಮ್ಮಿಂದ ಚಿಕಿತ್ಸೆ ಪಡೆದವರೊಬ್ಬರು ಕೃತಜ್ಞತೆ ಸಲ್ಲಿಸಿರುವ ಪರಿಯನ್ನು ಫೋಟೋ ಮೂಲಕ ಟ್ವಿಟ್ಟರ್​ನಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

ಜೀವ ಉಳಿಸಿರುವ ರೋಗಿ ಕೃತಜ್ಞತೆಗೆ ಮನಸೋತ ವೈದ್ಯ

ಮೂರು ವಾರಗಳ ಹಿಂದೆ ಹೃದ್ರೋಗಕ್ಕೆ ತಮ್ಮಿಂದ ಚಿಕಿತ್ಸೆ ಪಡೆದ ವ್ಯಕ್ತಿಯೋರ್ವರು ಚೇತರಿಸಿಕೊಂಡ ಬಳಿಕ ತಮ್ಮೊಂದಿಗೆ ನಡೆದುಕೊಂಡ ಪರಿಗೆ ತಾನು ಮನಸೋತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಹೃದ್ರೋಗದಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ನಾವು ಆ್ಯಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ನೀಡಿದ್ದೆವು. ಜೀವ ಉಳಿಸಿರುವ ಕಾರ್ಯ ಮಾಡಿರುವ ನಮಗೆ ಈ ವ್ಯಕ್ತಿಯು ದೇವರ ಪ್ರಸಾದವನ್ನು ತಂದುಕೊಟ್ಟದ್ದಲ್ಲದೆ, ಸಾಷ್ಟಾಂಗ ನಮಸ್ಕಾರ ಮಾಡಲು ಬಂದಿದ್ದಾರೆ. ಇಂಥದ್ದೊಂದು ಕೃತಜ್ಞತೆ ವ್ಯಕ್ತವಾಗಿರುವುದಕ್ಕೆ ಪ್ರತಿಯಾಗಿ ನಾನು ನನ್ನೆಲ್ಲ ರೋಗಿಗಳಿಗೆ ಶಿರಬಾಗುತ್ತೇನೆ.‌ ಈ ರೀತಿಯ ಕೃತಜ್ಞತೆ ನಮ್ಮ ಶ್ರೇಷ್ಠ ಭಾರತೀಯ ಸಂಸ್ಕೃತಿ ಎಂದು ಡಾ. ಪದ್ಮನಾಭ ಕಾಮತ್​ ಬರೆದುಕೊಂಡಿದ್ದಾರೆ.

Last Updated : Dec 22, 2021, 6:27 AM IST

ABOUT THE AUTHOR

...view details