ಕರ್ನಾಟಕ

karnataka

ETV Bharat / state

ಫೇಸ್​ಬುಕ್​ನಲ್ಲಿ‌ ಜನಾರ್ದನ ಪೂಜಾರಿ ವಿರುದ್ಧ ಅವಹೇಳನಕಾರಿ ಪೋಸ್ಟ್ : ದೂರು ದಾಖಲು - congress leader Janardana pujari

ಜನಾರ್ದನ ಪೂಜಾರಿಯವರ ಫೋಟೋ ಅಪ್ಲೋಡ್ ಮಾಡಿ ಅದರ ಮೇಲೆ "ಎಣ್ಣೆಯಲ್ಲಿ ಕರಿದ ಗೋಲಿಬಜೆ, ಬೆಂಕಿಯಲ್ಲಿ ಕರಿದ ಗೋಲಿಬಜೆ" ಎಂದು ಅವಹೇಳಕಾರಿಯಾಗಿ ಪೋಸ್ಟ್ ಮಾಡಿದ್ದಾನೆ..

ಜನಾರ್ದನ ಪೂಜಾರಿ
ಜನಾರ್ದನ ಪೂಜಾರಿ

By

Published : Jun 26, 2021, 5:36 PM IST

ಮಂಗಳೂರು : ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಂಖಂಡ ಬಿ.ಜನಾರ್ದನ ಪೂಜಾರಿಯವರ ಬಗ್ಗೆ ಫೇಸ್ ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಕರಾವಳಿ ರಶೀದ್ ಟಿಪ್ಪು ಎಂಬಾತನ ವಿರುದ್ಧ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಈತ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ "ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಜನಾರ್ದನ ಪೂಜಾರಿಯವರು, ಸ್ವಂತ ಪಕ್ಷದಲ್ಲಿ ನಿರಂತರ ಅಧಿಕಾರ ಅನುಭವಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡುವ ವಿಚಿತ್ರ ವ್ಯಕ್ತಿ.‌ ಈವರೆಗೆ ಈತನನ್ನು ಹೈಕಮಾಂಡ್ ಕೂಡ ವಿರೋಧಿಸಿಲ್ಲ. ಈ ತರಹ ಯಾರಾದರೂ ಅಲ್ಪಸಂಖ್ಯಾತ ವ್ಯಕ್ತಿ ಮಾತನಾಡಿದ್ದಲ್ಲಿ ಕ್ಷಣ ಮಾತ್ರದಲ್ಲಿ ಕಾಂಗ್ರೆಸ್ ವಜಾಗೊಳಿಸುತ್ತಿತ್ತು.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ

ಹೈಕಮಾಂಡ್ ಬೆದರಿಕೆ ಕರೆಗಳು, ವಜಾಗೊಳಿಸುವ ಪತ್ರ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಲಭಿಸುತ್ತಿತ್ತು. ಒಂದು‌ ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಸಿದ್ಧಾಂತ ನಿಲ್ಲಿಸಿ" ಎಂದು ಬರೆದಿದ್ದಾನೆ. ಅಲ್ಲದೆ ಜನಾರ್ದನ ಪೂಜಾರಿಯವರ ಫೋಟೋ ಅಪ್ಲೋಡ್ ಮಾಡಿ ಅದರ ಮೇಲೆ "ಎಣ್ಣೆಯಲ್ಲಿ ಕರಿದ ಗೋಲಿಬಜೆ, ಬೆಂಕಿಯಲ್ಲಿ ಕರಿದ ಗೋಲಿಬಜೆ" ಎಂದು ಅವಹೇಳಕಾರಿಯಾಗಿ ಪೋಸ್ಟ್ ಮಾಡಿದ್ದಾನೆ.

ಈ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ಬಗ್ಗೆ ಅರಿತ ಆರೋಪಿ, ತಕ್ಷಣ ತನ್ನ ಪೋಸ್ಟ್ ಅನ್ನು‌ ಡಿಲಿಟ್ ಮಾಡಿದ್ದಾನೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details