ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎ, ಬಿ, ಸಿ ಹಂತದ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ವಿದೇಶದಿಂದ ಬಂದವರನ್ನು ಕೆಟಗರಿ ಹಂತದಲ್ಲಿ ಕ್ವಾರೆಂಟೇನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಮಾ. 31ರವರೆಗೆ ಕೆಲವು ಸರ್ಕಾರಿ ಕಚೇರಿಗಳು ಬಂದ್: ವಿಮಾನ ನಿಲ್ದಾಣದಲ್ಲಿ 3 ಹಂತದ ಸ್ಕ್ರೀನಿಂಗ್ - corona news latest news
ಮಂಗಳೂರು ವಿಮಾನ ನಿಲ್ದಾಣದಲ್ಲಿ ಎ, ಬಿ, ಸಿ ಸ್ಕ್ರೀನಿಂಗ್ ಆರಂಭಿಸಲಾಗಿದೆ. ಜನನಿಬಿಡ ಸರ್ಕಾರಿ ಕಚೇರಿಗಳನ್ನು ಮಾರ್ಚ್ 31ರವರೆಗೆ ಬಂದ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
![ಮಾ. 31ರವರೆಗೆ ಕೆಲವು ಸರ್ಕಾರಿ ಕಚೇರಿಗಳು ಬಂದ್: ವಿಮಾನ ನಿಲ್ದಾಣದಲ್ಲಿ 3 ಹಂತದ ಸ್ಕ್ರೀನಿಂಗ್ A, B, C screening stars in mangalore airport](https://etvbharatimages.akamaized.net/etvbharat/prod-images/768-512-6470178-thumbnail-3x2-mng.jpg)
ಜಿಲ್ಲಾಧಿಕಾರಿ ಸಿಂಧೂ ರೂಪೇಶ್
ಜಿಲ್ಲಾಧಿಕಾರಿ ಸಿಂಧೂ ರೂಪೇಶ್
ರೋಗದ ಲಕ್ಷಣ ಕಂಡು ಬಂದಲ್ಲಿ ಅಲ್ಲಿಂದಲೇ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. 60 ವರ್ಷ ಮೇಲ್ಪಟ್ಟ ಎಲ್ಲಾ ಪ್ರಯಾಣಿಕರನ್ನು 14 ದಿನಗಳ ಸರ್ಕಾರಿ ಹದ್ದುಬಸ್ತಿನಲ್ಲಿ ಕ್ವಾರೆಂಟೇನ್ ಮಾಡಲಾಗುತ್ತಿದೆ. ಅವರೆಲ್ಲರನ್ನು ಬಿ ಗುಂಪಿನಲ್ಲಿ ಸೇರಿಸಲಾಗುತ್ತಿದೆ. ಸಿ ಕೆಟಗರಿಯಲ್ಲಿ ಇರುವವನ್ನು ಹೋಮ್ ಕ್ವಾರೆಂಟೇನ್ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಲವು ಜನದಟ್ಟಣೆ ಇರುವ ಸರ್ಕಾರಿ ಕಚೇರಿಗಳನ್ನು ಮಾರ್ಚ್ 31ರವರೆಗೆ ಬಂದ್ ಮಾಡಲಾಗುತ್ತದೆ. ಅವಶ್ಯಕ ಸೇವೆಗಳನ್ನು ಹೊರತು ಪಡಿಸಿ ಉಳಿದ ಸೇವೆಗಳಿಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು.