ಕರ್ನಾಟಕ

karnataka

ETV Bharat / state

136 ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದ ಸಾಧಕ.. ವಿಶ್ವದಾಖಲೆ ಬರೆಯುವ ತವಕ

ಹಾವೇರಿ ಮೂಲದವರಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಮೈಕ್ರೋ ಪರಮೇಶ್, 80 ನಿಮಿಷದಲ್ಲಿ 136 ಅಕ್ಕಿ ಕಾಳುಗಳ ಮೇಲೆ ನಾಡಗೀತೆ ಬರೆದು ಸಾಧನೆ ಮಾಡಿದ್ದಾರೆ.

artist-wrote
136 ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದ ಸಾಧಕ

By

Published : Feb 2, 2022, 8:53 AM IST

ಸುಬ್ರಹ್ಮಣ್ಯ:ಸಣ್ಣ ಅಕ್ಕಿ ಕಾಳುಗಳನ್ನು ಕೈಯಿಂದ ಹೆಕ್ಕುವುದೇ ಕಷ್ಟ. ಆದರೆ, ಇಲ್ಲೊಬ್ಬ ಕಲೆಗಾರ ಚಿಕ್ಕ ಅಕ್ಕಿ ಕಾಳುಗಳ ಮೇಲೆ ನಮ್ಮ ನಾಡಗೀತೆಯಾದ 'ಜೈ ಭಾರತ ಜನನಿಯ ತನುಜಾತೆ' ಗೀತೆಯನ್ನು ಬರೆದು ದಾಖಲೆ ಸೃಷ್ಟಿಸಿದ್ದಾನೆ.

ಹಾವೇರಿ ಮೂಲದವರಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಮೈಕ್ರೋ ಪರಮೇಶ್ 80 ನಿಮಿಷದಲ್ಲಿ 136 ಅಕ್ಕಿ ಕಾಳುಗಳ ಮೇಲೆ ನಾಡಗೀತೆ ಪದ್ಯ ಬರೆದು ಸಾಧನೆ ಮಾಡಿದ್ದಾರೆ.

136 ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದ ಸಾಧಕ

ಅತಿ ಕಡಿಮೆ ಅವಧಿಯಲ್ಲಿ ಮತ್ತು ಕನಿಷ್ಠ ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದ ದಾಖಲೆ ಸೃಷ್ಟಿಸಿದ್ದಾರೆ. ಈ ಸಾಧನೆಗಾಗಿ ವಂಡರ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನವರು ಪರಮೇಶ್‌ರನ್ನು ಸಂಪರ್ಕಿಸಿದ್ದಾರೆ. ಅವರ ಮುಂದೆ ಶೀಘ್ರವೇ ತಮ್ಮ ಸಾಧನೆಯನ್ನು ಪ್ರದರ್ಶಿಸಲಿದ್ದಾರೆ.

ಓದಿ:ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ ಬಜೆಟ್ ಸಿದ್ಧತೆ: ಸದ್ಯದ ಹಣಕಾಸು ಪರಿಸ್ಥಿತಿ ಹೇಗಿದೆ?

ಪರಮೇಶ್ವರ್​ ಅವರು ಅಕ್ಕಿ ಕಾಳಿನ ಮೇಲೆ ಬರೆಯುವ ಅತೀ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಕ್ಕಿ ಕಾಳಿನ ಮೇಲೆ ಸಂಪೂರ್ಣ ನಾಡಗೀತೆಯನ್ನು ಬರೆದು ಅದಕ್ಕೆ ಫ್ರೇಮ್ ಅಳವಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ. ಮುಂದೆ ಈ ಸೂಕ್ಷ್ಮ ಕಲೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ಲಿಮ್ಕಾ ಮತ್ತು ಗಿನ್ನಿಸ್ ವಿಶ್ವದಾಖಲೆ ಮಾಡುವ ಹಂಬಲ ಪರಮೇಶ್ ಹೊಂದಿದ್ದಾರೆ.

136 ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದ ಸಾಧಕ

ಅಲ್ಲದೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನು 10 ಸಾವಿರಕ್ಕೂ ಅಧಿಕ ಅಕ್ಕಿ ಕಾಳಿನ ಮೇಲೆ ಕನಿಷ್ಠ ಅವಧಿಯಲ್ಲಿ ಬರೆದು ಗಿನ್ನಿಸ್ ರೆಕಾರ್ಡ್ ಮಾಡುವತ್ತ ಅಭ್ಯಾಸ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಅಕ್ಕಿ ಕಾಳಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮಹಾತ್ಮ, ಚರಿತ್ರೆ ಮತ್ತು ಇತಿಹಾಸ ಬರೆಯುವ ಹಂಬಲವೂ ಇದೆಯಂತೆ.

ಅದೇ ರೀತಿ ಅಕ್ಕಿ ಕಾಳಿನಲ್ಲಿ ಬರೆಯುವ ಸೂಕ್ಷ್ಮ ಕಲೆಯಲ್ಲಿ ವಿಶ್ವ ದಾಖಲೆ ಮಾಡುವ ಹಂಬಲ ನನ್ನದು. ಆಂಧ್ರಪ್ರದೇಶದ ಸಾಧಕಿಯೊಬ್ಬರು 4042 ಅಕ್ಕಿ ಕಾಳಿನ ಮೇಲೆ ಭಗವದ್ಗೀತೆಯನ್ನು ಬರೆದಿದ್ದಾರೆ. ಆದರೆ, ಇವರು ಸಮಯದ ಮಿತಿ ಹೊಂದಿಲ್ಲ. ಮುಂದೆ ನಾನು ಕನಿಷ್ಠ ಸಮಯದಲ್ಲಿ ಹೆಚ್ಚು ಅಕ್ಕಿ ಕಾಳಿನ ಮೇಲೆ ಬರೆದು ಸಾಧನೆ ಮಾಡುತ್ತೇನೆ ಎನ್ನುತ್ತಾರೆ ಸಾಧಕ ಮೈಕ್ರೋ ಪರಮೇಶ್.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details