ಕರ್ನಾಟಕ

karnataka

ETV Bharat / state

ಅಶ್ವತ್ಥ ಎಲೆಯಲ್ಲಿ ಮೂಡಿದ ಮೋದಿ: ಮೋಡಿಯಾದ ಪ್ರಧಾನಿಯಿಂದ ಟ್ವೀಟ್! - Narendra Modi birthday

ಸುಳ್ಯ ತಾಲೂಕಿನ ಅಡ್ಕರ್ ಎಂಬಲ್ಲಿನ ಕಲಾವಿದ ಶಶಿ ಅಡ್ಕಾರ್ ಎಂಬುವರು ಅಶ್ವತ್ಥ ಎಲೆಯಲ್ಲಿ ಮೋದಿಯವರ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ಮೆಚ್ಚಿರುವ ಪ್ರಧಾನಿ ಮೋದಿ ತಮ್ಮ ಟ್ಟಿಟ್ಟರ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಲಾವಿದ ಶಶಿ ಅಡ್ಕಾರ್
ಕಲಾವಿದ ಶಶಿ ಅಡ್ಕಾರ್

By

Published : Sep 17, 2020, 11:36 PM IST

ಮಂಗಳೂರು: ಕಲಾವಿದರೋರ್ವರು ಅಶ್ವತ್ಥ ಎಲೆಯಲ್ಲಿ ಕಲಾತ್ಮಕವಾಗಿ ಕತ್ತರಿಸಿ ಪ್ರಧಾನಿ ಮೋದಿಯವರ ಚಿತ್ರ ರಚಿಸಿದ್ದರು. ಈ ಚಿತ್ರ ಮೋದಿಯವರನ್ನೇ ಮೋಡಿ ಮಾಡಿದ್ದು, ಸ್ವತಃ ಅವರೇ ಚಿತ್ರವನ್ನು ಮೆಚ್ಚಿ ತಮ್ಮ ಟ್ವಿಟ್ಟರ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಶ್ವತ್ಥ ಎಲೆಯಲ್ಲಿ ಮೂಡಿದ ಮೋದಿ

ಸುಳ್ಯ ತಾಲೂಕಿನ ಅಡ್ಕರ್ ಎಂಬಲ್ಲಿನ ಕಲಾವಿದ ಶಶಿ ಅಡ್ಕಾರ್ ಎಂಬುವರು ನಿನ್ನೆ ಒಂದೂವರೆ ತಾಸು ಪ್ರಯತ್ನ ಪಟ್ಟು, ಅಶ್ವತ್ಥ ಎಲೆಯ ಮೇಲೆ ಮೋದಿ ಅವರ ಚಿತ್ರ ಬಿಡಿಸಿದ್ದರು. ಮೊದಲಿಗೆ ಅಶ್ವತ್ಥ ಎಲೆಯಲ್ಲಿ ಮೋದಿಯವರ ಸ್ಕೆಚ್ ಬಿಡಿಸಿ, ಬ್ಲೇಡ್​ನಿಂದ ಶೇಪ್ ಮಾಡಿ, ಕತ್ತರಿಸಿ ಈ ಚಿತ್ರ ಬಿಡಿಸಿದ್ದರು‌. ಇಂದು ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಅವರು ತಮ್ಮ ಟ್ವಿಟ್ಟರ್​​ನಲ್ಲಿ 17 ಸೆಕೆಂಡ್​​ನ ವಿಡಿಯೋವನ್ನು ಖಾತೆಗೆ ಟ್ಯಾಗ್ ಮಾಡಿದ್ದರು.

ಪ್ರಧಾನಿ ಮೋದಿಯವರ ಟ್ವೀಟ್​

ಟ್ವೀಟ್ ಮಾಡಿದ ಅರ್ಧ ಗಂಟೆಯಲ್ಲೇ ಸ್ವತಃ ಮೋದಿಯವರೇ ಈ ಚಿತ್ರವನ್ನು ಮೆಚ್ಚಿ, ತಮ್ಮ ಟ್ವೀಟ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details