ಮಂಗಳೂರು: ಮೈಸೂರಿನ ದೇವಸ್ಥಾನ ಕೆಡವಿದ ಬಳಿಕ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿನ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 920 ಧಾರ್ಮಿಕ ಕೇಂದ್ರಗಳು ಅನಧಿಕೃತ ಕಟ್ಟಡದ ಪಟ್ಟಿಯಲ್ಲಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 920 ಧಾರ್ಮಿಕ ಕೇಂದ್ರಗಳು ಅನಧಿಕೃತ ಪಟ್ಟಿಯಲ್ಲಿದೆ. ಇದರಲ್ಲಿ 667 ದೇವಸ್ಥಾನಗಳು, 56 ಚರ್ಚ್, 186 ಮಸೀದಿ ಮತ್ತು 11 ಇತರ ಧಾರ್ಮಿಕ ಕೇಂದ್ರಗಳಾಗಿವೆ. ಈ ಮೊದಲು 1579 ಧಾರ್ಮಿಕ ಕೇಂದ್ರಗಳನ್ನು ಅನಧಿಕೃತ ಎಂದು ಗುರುತಿಸಲಾಗಿತ್ತು. ಇದರಲ್ಲಿ 1202 ದೇವಸ್ಥಾನ, 79 ಚರ್ಚ್ , 281 ಮಸೀದಿ ಮತ್ತು 17 ಇತರ ಧಾರ್ಮಿಕ ಕೇಂದ್ರಗಳಿದ್ದವು. ಇದರಲ್ಲಿ ಈಗಾಗಲೇ 356 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಕೆಡವಲಾಗಿದೆ. ಅದರಲ್ಲಿ 267 ದೇವಸ್ಥಾನ, 13 ಚರ್ಚ್ , 71 ಮಸೀದಿ ಮತ್ತು 5 ಇತರ ಧಾರ್ಮಿಕ ಕೇಂದ್ರಗಳಾಗಿವೆ.
ಅನಧಿಕೃತ ಎಂದು ಗುರುತಿಸಲಾದ ಧಾರ್ಮಿಕ ಕೇಂದ್ರಗಳಲ್ಲಿ 152 ಕ್ರಮಬದ್ದ ಮಾಡಲಾಗಿದೆ. ಅದರಲ್ಲಿ 124 ದೇವಸ್ಥಾನ, 7 ಚರ್ಚ್ , 20 ಮಸೀದಿ ಮತ್ತು 1 ಇತರ ಧಾರ್ಮಿಕ ಕೇಂದ್ರವಾಗಿದೆ. ಅನಧಿಕೃತ ಎಂದು ಗುರುತಿಸಲಾದ ಧಾರ್ಮಿಕ ಕೇಂದ್ರಗಳಲ್ಲಿ 151ನ್ನು ಕೈಬಿಡಲಾಗಿದ್ದು, ಅದರಲ್ಲಿ 108 ದೇವಸ್ಥಾನ, 19 ಚರ್ಚ್, 23 ಮಸೀದಿ ಮತ್ತು 1 ಇತರ ಧಾರ್ಮಿಕ ಕೇಂದ್ರಗಳಾಗಿದೆ.