ಕರ್ನಾಟಕ

karnataka

ETV Bharat / state

ಮಂಗಳೂರು ವಿಮಾನ‌ ನಿಲ್ದಾಣದಲ್ಲಿ 91 ಲಕ್ಷ ಮೌಲ್ಯದ ಚಿನ್ನ ಮತ್ತು ವಿದೇಶಿ ಕರೆನ್ಸಿ ವಶ - ಈಟಿವಿ ಭಾರತ ಕನ್ನಡ

ಚಿನ್ನ ಮತ್ತು ವಿದೇಶಿ ಕರೆನ್ಸಿ ಅಕ್ರಮ ಸಾಗಣೆ - ಮಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಆರೋಪಿ- 91 ಲಕ್ಷ ಮೌಲ್ಯದ ಸೊತ್ತು ವಶಕ್ಕೆ

airport
ಮಂಗಳೂರು ವಿಮಾನ‌ ನಿಲ್ದಾಣ

By

Published : Feb 20, 2023, 1:38 PM IST

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಮತ್ತು ವಿದೇಶಿ ಕರೆನ್ಸಿಯನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 15 ದಿನದಲ್ಲಿ ಒಟ್ಟು ಐದು ಪುರುಷ ಪ್ರಯಾಣಿಕರಿಂದ 91,35,850 ರೂಪಾಯಿ ಮೌಲ್ಯದ 16,25,000 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 1 ರಿಂದ 15 ರವರೆಗಿನ ಅವಧಿಯಲ್ಲಿ ದುಬೈ ಮತ್ತು ಬಹ್ರೇನ್‌ನಿಂದ ಬಂದ ಪ್ರಯಾಣಿಕರಿಂದ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಟ್ರಾಲಿ ಬ್ಯಾಗ್‌ನ ಹಿಡಿಕೆಯಲ್ಲಿ, ಗುದನಾಳದಲ್ಲಿ, ಬಾಯಿಯ ಕುಳಿಯಲ್ಲಿ ಮತ್ತು ಪೆಟ್ಟಿಗೆಯೊಳಗೆ ತೆಳುವಾದ ಪೇಸ್ಟ್ ಪದರದ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ.

ವಿದೇಶಿ ಕರೆನ್ಸಿ ವಶ:ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂ.IX 383 ಮೂಲಕ ಭಾರತದಿಂದ ದುಬೈಗೆ ವಿದೇಶಿ ಕರೆನ್ಸಿಗಳ ಕಳ್ಳಸಾಗಣೆಯನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಒಬ್ಬ ಪುರುಷ ಪ್ರಯಾಣಿಕರಿಂದ 5100 ಯುಎಸ್​ ಡಾಲರ್ ಮತ್ತು 2420 ಪೌಂಡ್ ಸ್ಟರ್ಲಿಂಗ್ ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ನಿಕ್ಕಿ ಯಾದವ್​ ಹತ್ಯೆ ಪ್ರಕರಣ: ವಿವಾಹ ಸಾಕ್ಷಿ ಪಡೆಯಲು ಆರೋಪಿಯೊಂದಿಗೆ ಆರ್ಯ ಸಮಾಜ ಮಂದಿರಕ್ಕೆ ತೆರಳಿದ್ದ ಪೊಲೀಸರು

2.50 ಕೋಟಿ ರೂ. ಮೌಲ್ಯದ ವಜ್ರ ವಶ: ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಭಾರಿ ಪ್ರಮಾಣದ ವಜ್ರವನ್ನು ವಶಕ್ಕೆ ಪಡೆಯಲಾಗಿತ್ತು. ಭಾರತದಿಂದ ದುಬೈಗೆ ಅಕ್ರಮವಾಗಿ ವಿಮಾನದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರವನ್ನು ಸಾಗಿಸಲಾಗುತ್ತಿತ್ತು. ಸಾಗಾಟ ಮಾಡುತ್ತಿದ್ದ ಆರೋಪಿಗಳಿಗೆ ಮುಂಬೈನಿಂದ ಸಂಪರ್ಕ ಹೊಂದಿದ್ದು, ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ದುಬೈಗೆ ಪ್ರಯಾಣಿಸುತ್ತಿದ್ದ ಮಂಗಳೂರು ಭಟ್ಕಳದ ಅನಾಸ್​ ಮತ್ತು ಅಮ್ಮರ್​ ಎಂಬವರು ತಮ್ಮ ಶೂ ಮತ್ತು ಬ್ಯಾಗ್​ನ ಅಡಿಯಲ್ಲಿ ಅನುಮಾನ ಬಾರದಂತೆ ವಜ್ರವನ್ನು ಅಡಗಿಸಿಟ್ಟು ಸಾಗಾಟಣೆ ಮಾಡುತ್ತಿದ್ದರು. ಈ ವೇಳೆ ವಿಮಾನ ನಿಲ್ದಾಣದ ಇಮಿಗ್ರೇಶನ್​ ವಿಭಾಗದಲ್ಲಿ ತಪಾಸಣೆ ನಡೆಸುವ ವೇಳೆ ಬೆಲೆಬಾಳುವ ವಜ್ರ ಪತ್ತೆಯಾಗಿತ್ತು.

ಆಸ್ಟ್ರೇಲಿಯಾ, ನ್ಯೂಜಿಲೆಂಡ್​ಗೆ ಡ್ರಗ್​ ಸಾಗಣೆ:ಕೆಲವು ದಿನಗಳ ಹಿಂದೆ ಅಂತಾರಾಷ್ಟ್ರೀಯ ಡ್ರಗ್​ ಪೆಡ್ಲರ್​ಗಳನ್ನು ಹೈದರಾಬಾದ್​ನ ಶಂಶಾಬಾದ್​ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆರೋಪಿಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ಗೆ ಶಂಶಾಬಾದ್​ ವಿಮಾನ ನಿಲ್ದಾಣದಿಂದ ಡ್ರಗ್​ ಮಾರಾಟ ಮಾಡುತ್ತಿದ್ದರು. ಬಳೆ ಬಾಕ್ಸ್​ ಮತ್ತು ಬ್ರಾಂಡೆಡ್​ ಬಟ್ಟೆ ಬಾಕ್ಸ್​ಗಳಲ್ಲಿ ಇಟ್ಟು ಕೊರಿಯರ್​ ಏಜೆನ್ಸಿ ಮೂಲಕ ಸಾಗಿಸುತ್ತಿದ್ದರು. ಈ ವೇಳೆ ಆರೋಪಿಗಳಾದ ಶೇಖ್​ ಫರಿದ್​ ಮೊಹಮ್ಮದ್​ ಅಲಿ ಮತ್ತು ಫೈಜಾನ್​ ಅರುಣ್​ ಮುಜಾಹಿದ್​ ಎಂಬವರನ್ನು ಮಲ್ಕಜಿಗಿರಿ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಮಂಗಳೂರು: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ಗೆ​ ಎದೆನೋವು - ತಪಾಸಣೆ ಬಳಿಕ ಆತಂಕ ನಿವಾರಣೆ

ABOUT THE AUTHOR

...view details