ಮಂಗಳೂರು: ದುಬೈನಿಂದ ಬಂದಿಳಿದ ಪ್ರಯಾಣಿಕರು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಲಾಗುತ್ತಿದ್ದ ಸುಮಾರು 90 ಲಕ್ಷ ರೂ.ಮೌಲ್ಯದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
2023 ರ ಮಾರ್ಚ್ 1 ರಿಂದ 15 ರ ಅವಧಿಯಲ್ಲಿ ದುಬೈನಿಂದ ಬಂದ ಒಂದು ಹೆಣ್ಣು ಮಗು ಸೇರಿದಂತೆ ಮೂವರು ಪ್ರಯಾಣಿಕರಿಂದ 90,67,750 ರೂಪಾಯಿ ಮೌಲ್ಯದ 1,606 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಓರ್ವ ಪುರುಷ ಪ್ರಯಾಣಿಕ ತಾನು ಧರಿಸಿದ್ದ ಪ್ಯಾಂಟ್‌ನ ಸೊಂಟದ ಬ್ಯಾಂಡ್‌ನಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡಿದ್ದಾನೆ.
ಇದನ್ನೂ ಓದಿ:ಪಾದರಕ್ಷೆ, ಒಳಉಡುಪಿನಲ್ಲಿದ್ದ ₹1.40 ಕೋಟಿ ಮೌಲ್ಯದ 3 ಕೆಜಿ ಚಿನ್ನ ವಶಕ್ಕೆ!- ವಿಡಿಯೋ
ಇನ್ನು ಇತರ ಇಬ್ಬರು ಪ್ರಯಾಣಿಕರಲ್ಲಿ 21 ತಿಂಗಳ ಮಗುವಿನ ಡೈಪರ್ನಲ್ಲಿ ಸಹ ಚಿನ್ನ ಅಡಗಿಸಿಡಲಾಗಿತ್ತು. ಮಗುವಿನ ತಂದೆ ತನ್ನ ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದನು. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ಯಾಂಟ್, ಶರ್ಟ್ ಎಲ್ಲೆಲ್ಲೂ ಚಿನ್ನ.. 1.7 ಕೆಜಿ ಬಂಗಾರ ಕಳ್ಳಸಾಗಣೆ ಮಾಡುತ್ತಿದ್ದ ಚಾಲಾಕಿ ಬಂಧನ
ಹಿಂದಿನ ಪ್ರಕರಣಗಳು: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಮಾರ್ಚ್ 12 ರಂದು ಬಂಧಿಸಿದ್ದರು. ಮಾರ್ಚ್ 10 ರಂದು ಅಡಿಸ್ ಅಬಾಬಾದಿಂದ ಮುಂಬೈಗೆ ಆಗಮಿಸಿದ್ದ ಆರೋಪಿಗಳು ತಮ್ಮ ಒಳ ಉಡುಪು ಹಾಗೂ ಪಾದರಕ್ಷೆಗಳ ಒಳಭಾಗದಲ್ಲಿ ಬಂಗಾರವನ್ನು ಅಕ್ರಮವಾಗಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದರು. ಈ ವೇಳೆ, ಸುಮಾರು 1.40 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ:ಪೊಲೀಸ್ ಸೋಗಿನಲ್ಲಿ ₹1 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಎಗರಿಸಿದ ಖದೀಮರು- ಸಿಸಿಟಿವಿ ದೃಶ್ಯ
ಏರ್ ಇಂಡಿಯಾ ಎಕ್ಸ್ಪ್ರೆಸ್ ಉದ್ಯೋಗಿ ಸೆರೆ:ಇನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಉದ್ಯೋಗಿಯೊಬ್ಬರು ಒಂದೂವರೆ ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಸಹ ಕಸ್ಟಮ್ ಅಧಿಕಾರಿಗಳ ಕೈಗೆ ಇತ್ತೀಚೆಗೆ ಸಿಕ್ಕಿ ಬಿದ್ದಿದ್ದರು. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 8 ರಂದು ಘಟನೆ ನಡೆಸಿತ್ತು. ವಿಮಾನದ ಕ್ಯಾಬಿನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಫಿ ಎಂಬಾತ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂಬ ರಹಸ್ಯ ಕಸ್ಟಮ್ಸ್ ಅಧಿಕಾರಿಗಳಿಗೆ ಲಭಿಸಿತ್ತು. ವಿಮಾನ ಲ್ಯಾಂಡ್ ಆದ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ:ಚಿಕ್ಕಮಗಳೂರಲ್ಲಿ ನಕಲಿ ಚಿನ್ನ ಮಾರಾಟ ದಂಧೆ.. ತಾಮ್ರದ ನಾಣ್ಯವನ್ನೇ ಚಿನ್ನ ಎಂದು ನಂಬಬೇಡಿ!
ಚಪ್ಪಲಿಯೊಳಗೆ ಚಿನ್ನ ಸಾಗಣೆ:ಚಪ್ಪಲಿಯೊಳಗೆ ಮರೆಮಾಚಿ 1.2 ಕೆಜಿ ಚಿನ್ನವನ್ನು ಸಾಗಿಸಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 12 ರಂದು ಬಂದಿಳಿದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಕೃತ್ಯ ಬೆಳಕಿಗೆ ಬಂದಿತ್ತು. ಈ ವೇಳೆ 1205 ಗ್ರಾಂ ತೂಕದ 69,40,800 ಮೌಲ್ಯದ ಚಿನ್ನವನ್ನ ವಶಕ್ಕೆ ಪಡೆಯಲಾಗಿತ್ತು.