ಕರ್ನಾಟಕ

karnataka

ETV Bharat / state

ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ 9 ವರ್ಷದ ಹುಲಿ ಕುಸಿದು ಬಿದ್ದು ಸಾವು

ಮೃತಪಟ್ಟ ಹುಲಿಯ ಅಂಗಾಂಗಳ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ IAH & VB ಮತ್ತು ಉತ್ತರಪ್ರದೇಶದ IVRIಗೆ ಕಳುಹಿಸಲಾಗಿದೆ. ಕೊರೊನಾ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲದ NHSADಗೆ ಕಳುಹಿಸಲಾಗಿದೆ..

tiger
ಹುಲಿ

By

Published : Jan 4, 2022, 3:03 PM IST

ಮಂಗಳೂರು :ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 9 ವರ್ಷದ ಹುಲಿಯೊಂದು ಕುಸಿದು ಬಿದ್ದು ಮೃತಪಟ್ಟ ‌ಘಟನೆ ಸೋಮವಾರ ನಡೆದಿದೆ.

ಪಿಲಿಕುಳ ಜೈವಿಕ‌ ಉದ್ಯಾನವನದಲ್ಲಿದ್ದ ಓಲಿವರ್ ಎಂಬ 9 ವರ್ಷದ ಹುಲಿ ಮೃತಪಟ್ಟಿದೆ. ಹುಲಿಯು ಸೋಮವಾರ ಮುಂಜಾನೆಯವರೆಗೆ ಚುರುಕಾಗಿತ್ತು. ಒಮ್ಮಿಂದೊಮ್ಮೆಲೆ‌ ಕುಸಿದು ಬಿದ್ದು ಮೃತಪಟ್ಟಿದೆ.

ಕುಸಿದು ಬಿದ್ದ ಸಂದರ್ಭದಲ್ಲಿ ಹುಲಿಯ ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ ಫಲಪ್ರದವಾಗಿಲ್ಲ. ಹುಲಿಯು ಪಿಲಿಕುಳದ ವಿಕ್ರಮ ಮತ್ತು ಶಾಂಭವಿಗೆ ಜನಿಸಿದ ಎರಡು ಮರಿಗಳಲ್ಲಿ ಒಂದಾಗಿದೆ. ಪಿಲಿಕುಳದಲ್ಲಿ ಸದ್ಯ 12 ಹುಲಿಗಳಿವೆ.

ಮೃತಪಟ್ಟ ಹುಲಿಯ ಅಂಗಾಂಗಳ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ IAH & VB ಮತ್ತು ಉತ್ತರಪ್ರದೇಶದ IVRIಗೆ ಕಳುಹಿಸಲಾಗಿದೆ. ಕೊರೊನಾ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲದ NHSADಗೆ ಕಳುಹಿಸಲಾಗಿದೆ.

ಮೃಗಾಲಯದಲ್ಲಿ ಅನುಮಾನಸ್ಪದ ಯಾವುದೇ ರೋಗಗಳು ಹರಡದಂತೆ ರೋಗ ನಿರೋಧಕ ದ್ರಾವಣವನ್ನು ಪ್ರಾಣಿಗಳ ಆವರಣದ ಒಳಗೆ ಮತ್ತು ಸುತ್ತಮುತ್ತ ಸಿಂಪಡಿಸಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್ ಜೆ ಭಂಡಾರಿ ತಿಳಿಸಿದ್ದಾರೆ.

ಓದಿ:ಯುವತಿಯ ಬಣ್ಣದ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಹುಬ್ಬಳ್ಳಿ ಯುವಕ

ABOUT THE AUTHOR

...view details