ಕರ್ನಾಟಕ

karnataka

ETV Bharat / state

ಬೊಕ್ಕಪಟ್ಣದಲ್ಲಿ ಕೊಲೆ ಪ್ರಕರಣ; 9 ಮಂದಿ ಬಂಧನ - Latest crime news

ಹಳೆ ವೈಷಮ್ಯ ಇಟ್ಟುಕೊಂಡು ವ್ಯಕ್ತಿಯೊಬ್ಬನನ್ನು ಮಾರಾಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಬರೋಬ್ಬರಿ 9 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

9 accused arrested in Mangaluru after murder
ಬಂಧಿತ ಆರೋಪಿಗಳು

By

Published : Nov 28, 2020, 9:14 PM IST

ಮಂಗಳೂರು: ಮಂಗಳೂರಿನ ಬೊಕ್ಕಪಟ್ಣದಲ್ಲಿ ಇಂದ್ರಜಿತ್ (28 ) ಎಂಬ ಯುವಕನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೋಳೂರಿನ ಮೋಕ್ಷಿತ್, ಉಲ್ಲಾಸ್ ಕಾಂಚನ್, ಆಶಿಕ್, ರಾಕೇಶ್, ಗೌತಮ್, ಕೌಶಿಕ್, ಜಗದೀಶ್ ಯಾನೆ ತಲವಾರ್ ಜಗ್ಗ, ಶರಣ್ ಮತ್ತು ಫರಂಗಿ ಪೇಟೆಯ ನಿತಿನ್ ಬಂಧಿತರು.

ಇದನ್ನೂ ಓದಿ: ದಂಪತಿ ನಡುವೆ ಜಗಳ : ಪತ್ನಿ ಕೊಲೆಗೈದ ಪತಿ

ಇವರು ಇಂದ್ರಜಿತ್​​ನನ್ನು ಮಂಗಳೂರಿನ ಬೊಕ್ಕಪಟ್ಣದ ಕರ್ನಲ್ ಗ್ರೌಂಡ್​​ನಲ್ಲಿ ಮಾರಾಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಆರು ವರ್ಷದ ಹಿಂದೆ ಮಂಕಿಸ್ಟ್ತಾಂಡ್ ರೌಡಿ ಗ್ಯಾಂಗ್​​ನವರು ಸಂಜಯ್ ಯಾನೆ ವರುಣ್ ಎಂಬುವನನ್ನು ಹೊಯಿಗೆಬೈಲ್​​ನಲ್ಲಿ ಕೊಲೆ ಮಾಡಿದ್ದರು. ಅಂದು ಹತ್ಯೆಯಾದ ಸಂಜಯ್​ನ ತಂದೆ ಜಗದೀಶ್ ಯಾನೆ ತಲವಾರ್ ಜಗ್ಗ ತನ್ನ ಮಗನ ಕೊಲೆಗೆ ಪ್ರತಿಕಾರ ರೂಪಿಸಲು ಮಂಕಿಸ್ಟ್ತಾಂಡ್ ರೌಡಿ ಗ್ಯಾಂಗ್​ನೊಂದಿಗೆ ಗುರುತಿಸಿಕೊಂಡಿರುವ ಇಂದ್ರಜಿತ್​ನನ್ನು ಕೊಲೆ ಮಾಡಿದ್ದಾರೆ. ನವೆಂಬರ್ 26 ರಂದು ಬೆಳಕಿಗೆ ಬಂದಿರುವ ಈ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬರ್ಕೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ABOUT THE AUTHOR

...view details