ದ.ಕ.ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಶೇ.87 ಮಂದಿಗೆ ಉಪಯೋಗ.. ಡಿಹೆಚ್ಒ ಡಾ.ರಾಮಚಂದ್ರ ಬಾಯಿರಿ..
ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿಗಳು ಜಿಲ್ಲಾಸ್ಪತ್ರೆಗೆ ದಾಖಲಾಗಿ, ಅಲ್ಲಿ ಅವರ ರೋಗಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ವೈದ್ಯರ ಶಿಫಾರಸು ಪತ್ರದೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಆಯುಷ್ಮಾನ್ ಭಾರತ ಸೌಲಭ್ಯ ಪಡೆಯಬಹುದು. ಆದರೆ, ತುರ್ತು ಚಿಕಿತ್ಸೆಯ ಅಗತ್ಯವುಳ್ಳವರು ಮಾತ್ರ ನೇರವಾಗಿ ಆಸ್ಪತ್ರೆಗೆ ದಾಖಲಾಗಬಹುದು. ಡಯಾಗ್ನೋಸಿಸ್ಗೆ ಹಣ ಪಾವತಿ ಮಾಡಬೇಕು. ಆ ಬಳಿಕ ಪ್ಯಾಕೇಜ್ ಹಣ ಆಯುಷ್ಮಾನ್ ಭಾರತದಿಂದಲೇ ದೊರಕುತ್ತದೆ. ಈ ಬಗ್ಗೆ ಬದಲಾವಣೆಯಾಗಬೇಕಾದಲ್ಲಿ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಬಹುದು..
ದ.ಕ.ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಶೇ.87 ಮಂದಿಗೆ ಉಪಯೋಗ
ಮಂಗಳೂರು :ದ.ಕ.ಜಿಲ್ಲೆಯಲ್ಲಿ ಈವರೆಗೆ 24,88,42,088 ಕೋಟಿ ರೂ. ಹಣ ಆಯುಷ್ಮಾನ್ ಭಾರತ ಯೋಜನೆಗೆ ವಿನಿಯೋಗವಾಗಿದೆ. ಶೇ.87ಜನರು ಇದರ ಸದುಪಯೋಗ ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಹೇಳಿದರು.
ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿಗಳು ಜಿಲ್ಲಾಸ್ಪತ್ರೆಗೆ ದಾಖಲಾಗಿ, ಅಲ್ಲಿ ಅವರ ರೋಗಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ವೈದ್ಯರ ಶಿಫಾರಸು ಪತ್ರದೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಆಯುಷ್ಮಾನ್ ಭಾರತ ಸೌಲಭ್ಯ ಪಡೆಯಬಹುದು. ಆದರೆ, ತುರ್ತು ಚಿಕಿತ್ಸೆಯ ಅಗತ್ಯವುಳ್ಳವರು ಮಾತ್ರ ನೇರವಾಗಿ ಆಸ್ಪತ್ರೆಗೆ ದಾಖಲಾಗಬಹುದು. ಡಯಾಗ್ನೋಸಿಸ್ಗೆ ಹಣ ಪಾವತಿ ಮಾಡಬೇಕು. ಆ ಬಳಿಕ ಪ್ಯಾಕೇಜ್ ಹಣ ಆಯುಷ್ಮಾನ್ ಭಾರತದಿಂದಲೇ ದೊರಕುತ್ತದೆ. ಈ ಬಗ್ಗೆ ಬದಲಾವಣೆಯಾಗಬೇಕಾದಲ್ಲಿ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಬಹುದು ಎಂದು ಹೇಳಿದರು.
ಶಾಲೆಗಳು ಆರಂಭವಾಗಿದ್ದರೂ, ಇನ್ನೂ ಅತಿಥಿ ಶಿಕ್ಷಕರ ನೇಮಕವಾಗಬೇಕೆಂದು ಮಮತಾ ಗಟ್ಟಿಯವರು ಹೇಳಿದಾಗ ಡಿಡಿಪಿಐ ಮಾತನಾಡಿ, ಎರಡು ದಿವಸಗಳಲ್ಲಿ ಈ ಸಮಸ್ಯೆ ಸರಿಯಾಗಲಿದೆ. ಮೂರು ದಿವಸಗಳ ಒಳಗೆ ಆಯುಕ್ತರು ಅಧಿಕೃತ ಆದೇಶ ನೀಡುವ ಭರವಸೆ ನೀಡಿದ್ದಾರೆ. ಮಕ್ಕಳ ದಾಖಲಾತಿಯನ್ನು ಈಗಾಗಲೇ ಪಡೆಯಲಾಗಿದ್ದು, ಈ ಮೂಲಕ ಎಷ್ಟು ಶಾಲೆಗಳಿಗೆ ಎಷ್ಟು ವಿದ್ಯಾರ್ಥಿಗಳಿದ್ದಾರೆ ಎಂದು ಆನ್ಲೈನ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ.
ಆದ್ದರಿಂದ ಯಾವ ಶಾಲೆಗಳಿಗೆ ಎಷ್ಟು ಅತಿಥಿ ಶಿಕ್ಷಕರನ್ನು ನೇಮಕ ಮಾಡಬಹುದೆಂದು ಸೂಚನೆ ನೀಡುತ್ತಾರೆ ಎಂದು ಹೇಳಿದರು.ಕೊರೊನಾ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಅಕ್ಕಿ ಮತ್ತು ಬೇಳೆಗಳ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಇದು ಸರಿಯಾಗಿ ಎಲ್ಲರಿಗೂ ವಿತರಣೆಯಾಗದೆ ಧಾನ್ಯಗಳು ಹಾಳಾಗಿದೆ ಎಂಬ ವಿಚಾರದ ಬಗ್ಗೆ ಸದಸ್ಯ ಎಂಎಸ್ ಮಹಮ್ಮದ್ ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಅಕ್ಷರ ದಾಸೋಹ ಅಧಿಕಾರಿ, ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಜೂನ್-ಜುಲೈ ತಿಂಗಳ ಅಕ್ಕಿ-ಬೇಳೆ ಹಾಗೂ ಇನ್ನಿತರ ಸಾಮಾಗ್ರಿಗಳು ಗೋದಾಮಿಗೆ ಬಂದಿದ್ದು, ಆದರೆ ವಿತರಣೆ ಆದೇಶ ಇರದ ಕಾರಣ ಅಲ್ಲಿಯೇ ಉಳಿದಿತ್ತು. ಆ ಬಳಿಕ ಧಾನ್ಯಗಳನ್ನು ಪೂರ್ತಿಯಾಗಿ ಬಿಸಿಲಿಗೆ ಒಣಗಿಸಿ, ಶುಚಿಗೊಳಿಸಿ ವಿತರಣೆ ಮಾಡಲಾಗಿದೆ. ಮಳೆಗಾಲವಾದ್ದರಿಂದ ಬೇಳೆಗಳು ಸ್ವಲ್ಪ ಹಾಳಾಗಿದ್ದು, ಅದನ್ನು ಕೆಎಫ್ಸಿಸಿಗೆ ಹಿಂದಿರುಗಿಸಿ ಬದಲಿಗೆ ಬೇರೆ ಧಾನ್ಯಗಳನ್ನು ತರಿಸಿಕೊಳ್ಳಲಾಗಿದೆ ಎಂದು ಹೇಳಿದರು.ಈ ಸಂದರ್ಭ ದಕ್ಷಿಣ ಕನ್ನಡ ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್., ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ.ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿಯ ಧನಲಕ್ಷ್ಮಿ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.