ಮಂಗಳೂರು (ದ.ಕ):ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 11 ತಿಂಗಳ ಮಗು ಸೇರಿ 83 ಮಂದಿಗೆ ಕೊರೊನಾ ದೃಢಪಟ್ಟಿದೆ. 11 ತಿಂಗಳ ಗಂಡು ಮಗು, 1 ವರ್ಷದ ಹೆಣ್ಣು ಮಗು ಸೇರಿ 24 ಮಹಿಳೆಯರು ಹಾಗೂ 59 ಪುರುಷರಿಗೆ ಕೊರೊನಾ ದೃಢಪಟ್ಟಿದೆ.
ದಕ್ಷಿಣ ಕನ್ನಡದಲ್ಲಿ ಇಂದು 11 ತಿಂಗಳ ಮಗು ಸೇರಿ 83 ಮಂದಿಗೆ ತಗುಲಿದ ಕೊರೊನಾ - Mangalore corona infected
ಕರಾವಳಿಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಇಂದೂ ಸಹ 83 ಮಂದಿಗೆ ಸೋಂಕು ದೃಢವಾಗಿದ್ದು, ಇದರಲ್ಲಿ 11 ತಿಂಗಳ ಮಗು ಸಹ ಸೇರಿದೆ. ಈ ನಡುವೆ ಇಂದು ಜಿಲ್ಲೆಯಲ್ಲಿ ಒಟ್ಟು 99 ಮಂದಿ ಸೋಂಕಿನಿಂದ ಮುಕ್ತಿ ಪಡೆದು ಬಿಡುಗಡೆಯಾಗಿದ್ದಾರೆ.
ಇಂದು ದೃಢಪಟ್ಟ 83 ಪ್ರಕರಣಗಳಲ್ಲಿ 48 ಪ್ರಾಥಮಿಕ ಸಂಪರ್ಕ, 2 ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿದೆ. ಐಎಲ್ಐ ಪ್ರಕರಣದಲ್ಲಿ 20, ಸಾರಿ ಪ್ರಕರಣದಲ್ಲಿ 1, ಅಂತರ್ ಜಿಲ್ಲಾ ಪ್ರವಾಸ ಮಾಡಿದ ಇಬ್ಬರಲ್ಲಿ, ರ‍್ಯಾಂಡಮ್ ಟೆಸ್ಟ್ ವೇಳೆ ಮೂವರಲ್ಲಿ, ಸರ್ಜರಿ ಪೂರ್ವ ಟೆಸ್ಟ್ನಲ್ಲಿ 4 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಮೂವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಈ ನಡುವೆ ಜಿಲ್ಲೆಯಲ್ಲಿ ಇಂದು 99 ಮಂದಿ ಗುಣಮುಖರಾಗಿದ್ದು, ಜನತೆ ಕೊಂಚ ನಿರಾಳರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1,359 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 683 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 25 ಮಂದಿ ಸಾವನ್ನಪ್ಪಿದ್ದು, 650 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಮೂರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.