ಮಂಗಳೂರು (ದ.ಕ): ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 8 ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಸಾವನ್ನಪ್ಪಿದ ಎಂಟು ಮಂದಿಯಲ್ಲಿ ತಲಾ ಒಬ್ಬರು ದಾವಣಗೆರೆ, ಮೈಸೂರಿನವರಾಗಿದ್ದು ಆರು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ.
ದಾವಣಗೆರೆ ಜಿಲ್ಲೆಯ 60 ವರ್ಷದ ಮಹಿಳೆ, ಮೈಸೂರು ಜಿಲ್ಲೆಯ 75 ವರ್ಷದ ಪುರುಷ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ 36 ವರ್ಷದ ಮಹಿಳೆ, 64 ವರ್ಷದ ಪುರುಷ, ಮಂಗಳೂರಿನ 60 ವರ್ಷದ ಪುರುಷ, 57 ವರ್ಷದ ಮಹಿಳೆ, 52 ವರ್ಷದ ಪುರುಷ, 87 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.