ಕರ್ನಾಟಕ

karnataka

ETV Bharat / state

ದ.ಕ ಜಿಲ್ಲೆಗೆ ಸೌದಿ ಶಾಕ್: 2 ವರ್ಷದ ಮಗು ಸೇರಿ ಇಂದು ಒಂದೇ ದಿನ 79 ಕೊರೊನಾ ಕೇಸ್​ ಪತ್ತೆ - ಕೊರೊನಾ ಪಾಸಿಟಿವ್ ಪ್ರಕರಣಗಳು 378ಕ್ಕೆ

79 ಕೊರೊನಾ ಪ್ರಕರಣಗಳಲ್ಲಿ 2 ವರ್ಷದ ಮಗು ಕೂಡ ಇದೆ. ಇಂದು ದೃಢಪಟ್ಟ ಪ್ರಕರಣಗಳಲ್ಲಿ ಮೂವರು ಮಹಾರಾಷ್ಟ್ರದಿಂದ ಬಂದವರಾಗಿದ್ದು, ಒಬ್ಬರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರು. ಉಳಿದಂತೆ 75 ಮಂದಿ ಸೌದಿ ಅರೇಬಿಯಾದಿಂದ ಬಂದವರಾಗಿದ್ದಾರೆ.

ಕೊರೊನಾ ಪ್ರಕರಣ
ಕೊರೊನಾ ಪ್ರಕರಣ

By

Published : Jun 16, 2020, 8:41 PM IST

ಮಂಗಳೂರು: ಜಿಲ್ಲೆಯಲ್ಲಿ ಈವರೆಗಿನ ಅತ್ಯಧಿಕ ಕೊರೊನಾ ಪ್ರಕರಣಗಳು ಇಂದು ಪತ್ತೆಯಾಗಿದ್ದು, ಇಂದು ಒಂದೇ ದಿನ 79 ಕೋವಿಡ್​​ ಪ್ರಕರಣಗಳು ದೃಢಪಟ್ಟಿವೆ.

79 ಕೊರೊನಾ ಪ್ರಕರಣಗಳಲ್ಲಿ 2 ವರ್ಷದ ಮಗು ಕೂಡ ಇದೆ. ಇಂದು ದೃಢಪಟ್ಟ ಪ್ರಕರಣಗಳಲ್ಲಿ ಮೂವರು ಮಹಾರಾಷ್ಟ್ರದಿಂದ ಬಂದವರಾಗಿದ್ದು, ಒಬ್ಬರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರು. ಉಳಿದಂತೆ 75 ಮಂದಿ ಸೌದಿ ಅರೇಬಿಯಾದಿಂದ ಬಂದವರಾಗಿದ್ದಾರೆ.

79 ಮಂದಿಯಲ್ಲಿ 72 ಮಂದಿ ಪುರುಷರು, 7 ಮಂದಿ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 378ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details