ಕರ್ನಾಟಕ

karnataka

ETV Bharat / state

ಮಂಗಳೂರು ಗೋಲಿಬಾರ್​ ಪ್ರಕರಣ: ಇಂದು ಮತ್ತೆ ಸಾಕ್ಷಿ ನುಡಿದ 75 ಮಂದಿ

ಮಂಗಳೂರು ಗೋಲಿಬಾರ್​ ಘಟನೆ ನಡೆದ ಸಂದರ್ಭ ಪ್ರತ್ಯಕ್ಷದರ್ಶಿಗಳು ತನಿಖೆಗೆ ಸಹಕಾರಿಯಾಗುವಂತೆ ಸಾಕ್ಷಿ ನುಡಿಯಲು ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ 75 ಮಂದಿ‌ ಬಂದು ಸಾಕ್ಷಿ‌‌ ಹೇಳಿದ್ದಾರೆ.

ಗೋಲಿಬಾರ್​ ಪ್ರಕರಣ,  75 people who witnessed the Golibar case
ಗೋಲಿಬಾರ್​ ಪ್ರಕರಣ

By

Published : Feb 6, 2020, 5:20 PM IST

ಮಂಗಳೂರು:ಡಿಸೆಂಬರ್ 19 ರಂದು ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಗಲಭೆಗೆ ತಿರುಗಿದ ವೇಳೆ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ, ಇಂದು ಮತ್ತೆ 75 ಮಂದಿ ಸಾಕ್ಷಿ ನುಡಿದಿದ್ದಾರೆ.

ನಗರದ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ಕೋರ್ಟ್ ಹಾಲ್​ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ ಸುಮಾರು 2 ಗಂಟೆವರೆಗೆ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಸಮ್ಮುಖದಲ್ಲಿ ಸಾರ್ವಜನಿಕರು ಸಾಕ್ಷಿ ನುಡಿದಿದ್ದಾರೆ.

ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯನ್ನು ಪ್ರತ್ಯಕ್ಷ ನೋಡಿದವರು ಹಾಗೂ ಘಟನೆ ನಡೆದ ಸಂದರ್ಭ ಸ್ಥಳದಲ್ಲೇ ಇದ್ದವರು ತನಿಖೆಗೆ ಸಹಕಾರಿಯಾಗುವಂತೆ ಸಾಕ್ಷಿ ನುಡಿಯಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆ ಇಂದು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ 75 ಮಂದಿ‌ ಬಂದು ಸಾಕ್ಷಿ‌‌ ಹೇಳಿದ್ದಾರೆ. ಇನ್ನೂ‌ ಕೂಡ ಏಳು ಮಂದಿ ಸಾಕ್ಷಿ ಹೇಳಲು ಬಾಕಿ ಇದ್ದು ಅವರಿಗೆ ಫೆ.13 ರಂದು ಅವಕಾಶ ನೀಡಲಾಗಿದೆ. ಇದುವರೆಗೆ 201ಮಂದಿ ಸಾಕ್ಷಿ ಹೇಳಿದ್ದಾರೆ. ಪೊಲೀಸರಿಗೆ ಸಾಕ್ಷಿ ಹೇಳಲು ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಗೋಲಿಬಾರ್​ ಪ್ರಕರಣದ ವಿಚಾರಣೆ

ಯಾರ ಬಳಿ ಅಂದಿನ ಘಟನೆಗೆ ಸಂಬಂಧಿಸಿದಂತೆ ವಿಡಿಯೋ, ಸಿಸಿ ಟಿವಿ ದೃಶ್ಯಗಳಿವೆಯೋ ಅವರು ಫೆ.13ರಂದು ವಿಚಾರಣೆ ಸಂದರ್ಭ ಬಂದು ಹಾಜರುಪಡಿಸಬಹುದು ಎಂದು ಇದೇ ವೇಳೆ ಸಾರ್ವಜನಿಕರಿಗೆ ತಿಳಿಸಿದರು.

ABOUT THE AUTHOR

...view details