ಮಂಗಳೂರು : ನಗರದಲ್ಲಿ ನಂಬರ್ ಪ್ಲೇಟ್ ರಹಿತ ವಾಹನಗಳ ಪತ್ತೆಗೆ ಪೊಲೀಸ್ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಇಲ್ಲಿಯವರೆಗೆ ಒಟ್ಟು 75 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆ: ನಂಬರ್ ಪ್ಲೇಟ್ ಇಲ್ಲದ 75 ಬೈಕ್ಗಳು ವಶಕ್ಕೆ - Mangalore district news
ನಂಬರ್ ಪ್ಲೇಟ್ ಇಲ್ಲದ ಸಾಕಷ್ಟು ವಾಹನಗಳು ನಗರದಲ್ಲಿ ಓಡಾಡುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ ನಂಬರ್ ಪ್ಲೇಟ್ ಇಲ್ಲದ ವಾಹನ ಜಪ್ತಿಗೆ ಪೊಲೀಸರು ಮುಂದಾಗಿದ್ದಾರೆ.
ಮಂಗಳೂರು ಜಿಲ್ಲಾ ಸುದ್ದಿ
ನಂಬರ್ ಪ್ಲೇಟ್ ಇಲ್ಲದ ಸಾಕಷ್ಟು ವಾಹನಗಳು ನಗರದಲ್ಲಿ ಓಡಾಡುತ್ತಿದ್ದು, ಇಂತಹ ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿ, ನಂಬರ್ ಪ್ಲೇಟ್ ಇಲ್ಲದ 75 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ನಿರಂತರ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.